ಭಾನುವಳ್ಳಿಯ ಶಾಲೆಯಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಭಾನುವಳ್ಳಿಯ ಶಾಲೆಯಲ್ಲಿ  ಸ್ನೇಹ ಸಮ್ಮಿಲನ ಕಾರ್ಯಕ್ರಮ

ಮಲೇಬೆನ್ನೂರು, ಆ. 19 – ಭಾನುವಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ  2004 -2005ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಸಂಘಟಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅವಿಸ್ಮರಣೀಯವಾಗಿತ್ತು. 

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಎಸ್.ಸಿ. ದಾನಪ್ಪ, ಬನ್ನಿಕೋಡು ಶಾಲೆಯ ಉಪ ಪ್ರಾಚಾರ್ಯ ವಿ.ಬಿ.  ಕೊಟ್ರೇಶಪ್ಪ, ದಾವಣಗೆರೆಯ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಉಪಾಧ್ಯಾಯ ಕೆ.ಎನ್. ಸಿದ್ದಪ್ಪ, ವಿಜ್ಞಾನ ಶಿಕ್ಷಕಿ ವಿ. ಭಾರತಿ, ಧೂಳೆಹೊಳೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಂ. ಸುರೇಶ್, ನಿವೃತ್ತ ಶಿಕ್ಷಕ ಎನ್. ಮಹೇಶಪ್ಪ, ಕಂಪ್ಯೂಟರ್ ಶಿಕ್ಷಕಿ ನಂದ, ದಾವಣಗೆರೆ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮ್ಯಾನೇಜರ್ ಸ್ವಾಮಿ, ಕುಂಬಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್. ವೇದಮೂರ್ತಿ, ಶಿಕ್ಷಕ ದಿ.ನಾಗಪ್ಪನವರ ಧರ್ಮಪತ್ನಿ ಚಿನ್ನಮ್ಮ, ದೇವತಾ ಕೊಟ್ರೇಗೌಡರ ಮಗ ಪ್ರಶಾಂತ್, ಬನ್ನಿಕೋಡು ಕಾಲೇಜಿನ ನಿವೃತ್ತ  ಪ್ರಾಚಾರ್ಯರಾದ ಶಾಯಿನಾ ಅವರನ್ನು ಸನ್ಮಾನಿಸಲಾಯಿತು. 

ಶಿಕ್ಷಕಿ ಜ್ಯೋತಿ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ್ ಕಡೇಮನಿ ಕಾರ್ಯಕ್ರಮ ನಿರೂಪಿಸಿದರೆ, ಡಾ. ಯಲ್ಲಪ್ಪ ರೆಡ್ಡಿ ವಂದಿಸಿದರು.

error: Content is protected !!