ಹರಪನಹಳ್ಳಿ : ಸಾದರ ಲಿಂಗಾಯತ ನೌಕರರ ಬಳಗದ ಕಾರ್ಯಕ್ರಮದಲ್ಲಿ ತರಳಬಾಳು ಮಠದ ವಿಶೇಷಾಧಿಕಾರಿ ವೀರಣ್ಣ ಎಸ್. ಜತ್ತಿ
ಹರಪನಹಳ್ಳಿ, ಆ. 19 – ಪ್ರತಿಭಾ ಪುರಸ್ಕಾರ ಮಕ್ಕಳಿಗೆ ಪ್ರೇರಣೆ, ಸ್ಫೂರ್ತಿಯಾಗುವ ಕಾರ್ಯಕ್ರಮ ಎಂದು ಸಿರಿಗೆರೆ ತರಳಬಾಳು ಮಠದ ವಿಶೇಷಾಧಿಕಾರಿ ವೀರಣ್ಣ ಎಸ್. ಜತ್ತಿ ಹೇಳಿದರು.
ಪಟ್ಟಣದ ತರಳ ಬಾಳು ಕಲ್ಯಾಣ ಮಂಟಪದಲ್ಲಿ ಸಾದರ ಲಿಂಗಾಯತ ನೌಕರರ ಬಳಗದ ವತಿಯಿಂದ ಸಾದರ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜದ ನಿವೃತ್ತ ನೌಕರರಿಗೆ ಗೌರವ ಸಮರ್ಪಣೆ, ಹಳೆಯ ನೌಕರರ ಸಂಘದ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳ ಮೇಲೆ ಒತ್ತಡ ಹೇರಬೇಡಿ, ನಿವೃತ್ತ ನೌಕರರು ಸಮಯ ವ್ಯರ್ಥ ಮಾಡದೇ ಶಾಲೆಗಳಿಗೆ ತೆರಳಿ ತಮ್ಮ ಅನುಭವ ಹಾಗೂ ಜ್ಞಾನವನ್ನು ಮಕ್ಕ ಳಿಗೆ ಧಾರೆ ಎರೆಯಿರಿ ಆರೋಗ್ಯ ಚೆನ್ನಾಗಿ ಇರುತ್ತದೆ.
ಪ್ರತಿ ವರ್ಷ ನಿವೃತ್ತ ನೌಕರರಿಗೆ ಸನ್ಮಾನಿಸುವ ವೆಚ್ಚವನ್ನು ನಾನು ಭರಿಸುತ್ತೇನೆ ಎಂದು ವಾಗ್ದಾನ ಮಾಡಿದ ಅವರು, ಇಂತಹ ಕಾರ್ಯಕ್ರಮವನ್ನು ನಿಲ್ಲಿಸಬೇಡಿ ಮುಂದುವರೆಸಿಕೊಂಡು ಹೋಗಿ ಎಂದು ತಿಳಿಸಿದರು.
ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಮಾತನಾಡಿ, ಶಿಕ್ಷಣಕ್ಕೆ ಇದ್ದಷ್ಟು ಬೆಲೆ ಯಾವುದಕ್ಕೂ ಇಲ್ಲ, ಉನ್ನತ ಹುದ್ದೆ ಅಲಂಕರಿಸಿದರೆ ಸಮಾಜ ನಿಮ್ಮನ್ನು ಗುರುತಿಸುತ್ತದೆ, ಉತ್ತಮ ಶಿಕ್ಷಣ ಪಡೆಯಿರಿ ಎಂದರು.
ಸಾಧು ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಬಂದೋಳ ಮಂಜುನಾಥ ಉದ್ಘಾಟನೆ ನೆರವೇರಿಸಿ ಮಾತನಾಡಿ, ಗುರುಗಳ ಋಣ ತೀರಿಸಲು ಸಾಧ್ಯವಿಲ್ಲ, ಗೌರವ ಕೊಡಿ. ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದರು.
ನಿವೃತ್ತ ಶಿಕ್ಷಕ ಮೈದೂರು ಎಚ್. ದೇವೇಂದ್ರಗೌಡ ಮಾತನಾಡಿ, ಸಾದರ ಲಿಂಗಾಯತ ನೌಕರರ ಬಳಗದಿಂದ ಸಾದರ ಲಿಂಗಾಯತ ಸಮಾ ಜದ ವಿದ್ಯಾರ್ಥಿಗಳ ಜೊತೆಗೆ ಮುಂದಿನ ದಿನಗಳಲ್ಲಿ ಅನ್ಯ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಘೋಷಿಸಿದರು.
ಕಾಂಗ್ರೆಸ್ ಮುಖಂಡ ಕಂಬತ್ತಹಳ್ಳಿ ಎಸ್. ಮಂಜುನಾಥ, ಎಂ.ಬಿ.ಯಶವಂತಗೌಡ, ಕೆಂಚನಗೌಡ, ನಿವೃತ್ತ ಶಿಕ್ಷಕ ಕೆ. ಬಸವರಾಜಪ್ಪ, ಶೇಖರಗೌಡ ಪಾಟೀಲ್, ಶಿವಕುಮಾರಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ರಾಮಪ್ಪ ಮಾತನಾಡಿದರು. ಸಾದರ ಲಿಂಗಾಯತ ನೌಕರರ ಬಳಗದ ತಾಲ್ಲೂಕು ಅಧ್ಯಕ್ಷ ಡಾ. ಚೇತನ ಬಣಕಾರ ಅಧ್ಯಕ್ಷತೆ ವಹಿಸಿದ್ದರು.
ಮುಖಂಡ ಉಚ್ಚಂಗಿ ದುರ್ಗದ ಅಂಜಿನಪ್ಪ, ಉದಯಶಂಕರ, ಕೆ.ಬಸವರಾಜ, ಶಿಕ್ಷಕರ ಸಂಘದ ಅಧ್ಯಕ್ಷ ಬಿ. ರಾಜಶೇಖರ, ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಬಿ. ಚಂದ್ರಮೌಳಿ, ಹರಿಯಮ್ಮನಹಳ್ಳಿ ಅಂಜಿನಪ್ಪ, ಸಿದ್ದಲಿಂಗನಗೌಡ, ಜಿ.ಆರ್. ಉಷಾರಾಣಿ, ಕೆ. ಚಂದ್ರಪ್ಪ, ಸಿದ್ದಪ್ಪ ಹರಿಂದ್ರಾಳು, ಬಿಇಒ ಕಚೇರಿ ಅಧೀಕ್ಷಕ ಕರಿಬಸವನಗೌಡ, ತಿಪ್ಪನಾಯನಕನಹಳ್ಳಿ ಅಂಜಿನಪ್ಪ, ಎಚ್. ಕೆಂಚಪ್ಪ, ಆರ್.ಎಸ್. ಸವಿತಾ, ಪಿ. ಮಲ್ಲಿಕಾರ್ಜುನ, ವಿ. ಮಲ್ಲಿಕಾರ್ಜುನ, ಎಂ. ಮಂಜಪ್ಪ, ಎಸ್. ಸಂತೋಷ, ಸಿದ್ದಪ್ಪ ಮಾರೇರ್, ಕೆ.ಜಿ. ಶಿವಕುಮಾರ, ವಿಜಯ ಬಣಕಾರ, ಮುನಿಯಪ್ಪ, ಉಸ್ಮಾನ್, ಜಯಣ್ಣ ಇತರರಿದ್ದರು.