240 ಕೋಟಿ ರೂ. ವೆಚ್ಚದಲ್ಲಿ ಮೂರು ಬಹುಗ್ರಾಮ ಕುಡಿಯುವ ನೀರು ಯೋಜನೆ

240 ಕೋಟಿ ರೂ. ವೆಚ್ಚದಲ್ಲಿ ಮೂರು  ಬಹುಗ್ರಾಮ ಕುಡಿಯುವ ನೀರು ಯೋಜನೆ

ರಾಣೇಬೆನ್ನೂರಿನ ಸ್ವಾತಂತ್ರೋತ್ಸವದಲ್ಲಿ ಶಾಸಕ ಪ್ರಕಾಶ ಕೋಳಿವಾಡ

ರಾಣೇಬೆನ್ನೂರು, ಆ. 18 – 240 ಕೋಟಿ ವೆಚ್ಚದಲ್ಲಿ ಭೈರವನ ಪಾದ, ಕರಲಗೇರಿ ಹಾಗೂ ಕುದರಿಹಾಳ ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮಂಜೂರಾತಿ ದೊರಕಿದ್ದು  ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವದು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಶಾಸಕರು ನಗರಸಭೆ ಕ್ರೀಡಾಂಗಣದಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಅಧ್ಯಕ್ಷತೆ ಮಾತನಾಡುತ್ತಿದ್ದರು. ಪ್ರತಿವರ್ಷ ನನಗೆ ಸಿಗುವ ಎರಡು ಕೋಟಿ ಅನುದಾನವನ್ನು  ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟಿದ್ದೇನೆ.

ನಗರ ಪ್ರದೇಶಗಳ ಮಕ್ಕಳಂತೆ ಗ್ರಾಮೀಣ ಮಕ್ಕಳು ಆಧುನಿಕ ಪದ್ಧತಿಯಲ್ಲಿ ಶಿಕ್ಷಣ ಪಡೆಯಬೇಕು ಎನ್ನುವ ಆಶಯದಂತೆ ತಾಲ್ಲೂಕಿನ 100 ಶಾಲೆಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿ, ಮುಜರಾಯಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವಿವಿಧ ಯೋಜನೆಗಳಿಗೆ ಅಲ್ಲಿಂದಲೇ ಅನುದಾನ ತರಲು ಸಾಧ್ಯವಿದ್ದು ಆ ಪ್ರಯತ್ನ ನಡೆಸಿದ್ದೇನೆ ಎಂದು ಶಾಸಕರು ಹೇಳಿದರು.

ಎಲ್ಲೆಡೆ ಬ್ರಷ್ಟಾಚಾರ ತಾಂಡವವಾಡುತ್ತಿದೆ. ಶಾಸಕರಾಗಲು, ಸಂಸದರಾಗಲು  50 ರಿಂದ 100 ಕೋಟಿಗೂ ಅಧಿಕ ಹಣ ಖರ್ಚು ಮಾಡುವ ರಾಜಕಾರಣಿ ಭ್ರಷ್ಠನಾಗದಿರಲು ಸಾಧ್ಯವೇ ಎನ್ನುವುದನ್ನು ಆತ್ಮಾವಲೋಕನ ಮಾಡುವುದು ಇಂದು ಅವಶ್ಯವಿದ್ದು, ಎಲ್ಲರೂ ಆ ದಿಶೆಯಲ್ಲಿ ಚಿಂತನ-ಮಂತನ ಮಾಡಿ ಬ್ರಷ್ಟಾಚಾರ ತಡೆಯಲು ಪ್ರಯತ್ನಿಸಬೇಕು ಎಂದು ಪ್ರಕಾಶ್‌ ಮನವಿ ಮಾಡಿದರು.

ತಹಶೀಲ್ದಾರ್ ಎಂ.ಎನ್. ಬಾಗವಾನ ಧ್ವಜಾರೋಹಣ ನೆರವೇರಿಸಿದರು. ನಗರಸಭೆ ಸದಸ್ಯ ಶೇಖಪ್ಪ ಹೊಸಗೌಡ್ರ, ಪ್ರಕಾಶ ಪೂಜಾರ, ಪುಟ್ಟಪ್ಪ ಮರಿಯಮ್ಮನರ, ಶಿಕ್ಷಣಾಧಿಕಾರಿ ಎಸ್.ಎಸ್. ಅಡಿಗ ಸ್ವಾಗತಿಸಿದರು. ವೇದಿಕೆಯಲ್ಲಿ ಬಿಇಒ ಪರಮೇಶ್‌, ಡಿವೈಎಸ್‌ಪಿ ಡಾ. ಗಿರೀಶ ಬೋಜಣ್ಣನವರ, ಮತ್ತಿತರರಿದ್ದರು.

error: Content is protected !!