ಅಕ್ಕಮಹಾದೇವಿ ಸಮಾಜದ ವತಿಯಿಂದ ಇಂದು ಸಂಜೆ 5 ಗಂಟೆಗೆ ನೂಲು ಹುಣ್ಣಿಮೆ ಕಾರ್ಯಕ್ರಮ ನಡೆಯಲಿದೆ.
ಶ್ರೀಮತಿ ರಾರಾವಿ ಪುಷ್ಪ ಚಾಮರಾಜನಗರ ಒಡೆಯರ ಜನ್ಮ ದಿನಾಚರಣೆ ಸವಿ ನೆನಪಿನ ಬಗ್ಗೆ ಮಾತನಾಡಲಿದ್ದಾರೆ. ಶ್ರೀಮತಿ ಮಾಗಾನಹಳ್ಳಿ ರತ್ನಮ್ಮ ಶ್ರಾವಣ ಮಾಸದ ಹಬ್ಬಗಳ ಬಗ್ಗೆ, ಉಮಾ ಎಮ್ಮಿ ರವೀಂದ್ರನಾಥ ಠಾಗೋರ್ ಪುಣ್ಯಸ್ಮರಣೆ ಬಗ್ಗೆ ಹಾಗೂ ಶ್ರೀಮತಿ ಆಶಾ ಚಿತ್ರಿಕಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಮಾತನಾಡಲಿದ್ದಾರೆ.
ಅಕ್ಕಮಹಾದೇವಿ ಸಮಾಜದ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷರಾದ ಕೆ.ಕೆ. ಸುಶೀಲಮ್ಮ ಅಧ್ಯಕ್ಷತೆ ವಹಿಸಲಿದ್ದು, ನೀಲಗುಂದ ಜಯಮ್ಮ ಅವರು ಚಿಂತನ-ಮಂಥನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.