ಮಲೇಬೆನ್ನೂರು, ಆ.18- ಪಟ್ಟಣದ ವಿವಿಧೆಡೆ 78ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಇಲ್ಲಿನ ಪುರಸಭೆ ಕಚೇರಿ ಮುಂಭಾಗ ಮತ್ತು ಹಳೇ ಮಂಡಲ ಪಂಚಾಯಿತಿ ವೃತ್ತದಲ್ಲಿ ಪುರಸಭೆ ಮುಖ್ಯ ಅಧಿಕಾರಿ ಹನುಮಂತಪ್ಪ ಭಜಕ್ಕನವರ್, ನಾಡಕಚೇರಿ ಆವರಣದಲ್ಲಿ ಉಪ ತಹಶೀಲ್ದಾರ್ ಆರ್. ರವಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ, ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಪ್ರಭು ಕೆಳಗಿನ ಮನಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಸಹಕಾರ ಸಂಘದಲ್ಲಿ ಸಂಘದ ಅಧ್ಯಕ್ಷ ಡಾ.ಬಿ. ಚಂದ್ರಶೇಖರ್ ಧ್ವಜಾರೋಹಣ ನೆರವೇರಿಸಿ, ವಂದನೆ ಸ್ವೀಕರಿಸಿದರು.
ಪುರಸಭೆ ಮತ್ತು ನಾಡಕಚೇರಿ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಖಲೀಲ್, ನಯಾಜ್, ಬಿ. ಮಂಜುನಾಥ್, ಭೋವಿ ಶಿವು, ಷಾ ಅಬ್ರಾರ್, ಸಾಬೀರ್ ಅಲಿ, ದಾದಾಪೀರ್, ಕೆ.ಜಿ. ಲೋಕೇಶ್, ವಿಜಯಲಕ್ಷ್ಮಿ ಕೆ.ಪಿ. ಗಂಗಾಧರ್, ಭಾನುವಳ್ಳಿ ಸುರೇಶ್, ಪಿ.ಆರ್. ರಾಜು, ಭೋವಿ ಕುಮಾರ್, ಯುಸೂಫ್, ಜಿಗಳೇರ ಹಾಲೇಶಪ್ಪ, ಓ.ಜಿ. ಕುಮಾರ್, ಎಂ.ಪಿ. ರುಸ್ತುಂ, ನಾಮನಿರ್ದೇಶಿತ ಸದಸ್ಯರಾದ ಬಿ. ವೀರಯ್ಯ, ಬಿ. ರಫೀಕ್ ಸಾಬ್, ಎ. ಆರೀಫ್ ಅಲಿ, ದೊಡ್ಮನಿ ಬಸವರಾಜ್, ಎಕ್ಕೆಗೊಂದಿ ಕರಿಯಪ್ಪ, ಪುರಸಭೆ ಅಧಿಕಾರಿಗಳಾದ ನವೀನ್, ದಿನಕರ್, ಉಮೇಶ್ ಸೇರಿದಂತೆ ಎಲ್ಲಾ ಅಧಿಕಾರಿಗಳು, ಪೌರ ಕಾರ್ಮಿಕರು, ನಾಡಕಚೇರಿಯ ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿಗಳಾದ ಅಣ್ಣಪ್ಪ, ಕೊಟ್ರೇಶ್, ಬೋರಯ್ಯ, ಶರೀಫ್, ಸೌಮ್ಯ, ಶ್ರೀಧರ್ ಮತ್ತಿತರರು ಭಾಗವಹಿಸಿದ್ದರು.
ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಹಿರಿಯ ಪ್ರಾಥಮಿಕ ಶಾಲೆ : ಲಯನ್ಸ್ ಕ್ಲಬ್ ಅಧ್ಯಕ್ಷೆ ಪಾರ್ವತಮ್ಮ ಇ.ಎಂ. ಮರುಳಸಿದ್ದೇಶ್ ಧ್ವಜಾರೋಹಣ ಮಾಡಿದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ರೂಪಾ ಪಾಟೀಲ್, ಖಜಾಂಚಿ ರೋಹಿಣಿ ಜಗದೀಶ್ವರ ಸ್ವಾಮಿ, ಲಯನ್ಸ್ ಮಾಜಿ ಗೌರ್ನರ್ ಡಾ.ಟಿ. ಬಸವರಾಜ್, ಮಾಜಿ ಅಧ್ಯಕ್ಷ ಓ.ಜಿ. ರುದ್ರಗೌಡ್ರು, ಎನ್.ಜಿ. ಶಿವಾಜಿ ಪಾಟೀಲ್, ಎಚ್.ಜಿ. ಚಂದ್ರಶೇಖರ್, ಎನ್.ಜಿ. ಬಸವನಗೌಡ್ರು, ಬಿ.ಎಂ. ಜಗದೀಶ್ವರ ಸ್ವಾಮಿ, ಸಿರಿಗೆರೆ ಸಿದ್ದಪ್ಪ, ಲಯನ್ಸ್ ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್, ಹನುಮಗೌಡ ಮತ್ತಿತರರಿದ್ದರು.
ಕೆಂಚಪ್ಪ ಮಡಿವಾಳರ ಹಿರಿಯ ಪ್ರಾಥಮಿಕ ಶಾಲೆ : ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಬಿ.ಸಿ. ವಿಜಯ ರಾಘವ ಧ್ವಜಾರೋಹಣ ನೆರವೇರಿಸಿದರು.
ಸಂಸ್ಥೆಯ ಕಾರ್ಯದರ್ಶಿ ಎಚ್.ಜಿ. ಚಂದ್ರಶೇಖರ್, ಸದಸ್ಯರಾದ ಜಿಗಳಿ ಇಂದೂಧರ್, ಎಂ.ಆರ್. ಮಾರಪ್ಪ, ಎಂ.ಕೆ. ಶಾಂತಮ್ಮ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ಎನ್. ವೀರೇಶ್, ಕಾರ್ಯದರ್ಶಿ ಶಿವರಾಜ್, ಖಜಾಂಚಿ ಎಂ.ಕೆ. ಗಜೇಂದ್ರ ಸ್ವಾಮಿ, ಪಿ.ಎಚ್. ಶಿವಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಸನಾವುಲ್ಲಾ, ಶಾಲಾ ಮುಖ್ಯ ಶಿಕ್ಷಕ ದಂಡಿ ತಿಪ್ಪೇಸ್ವಾಮಿ ಹಾಗೂ ಶಿಕ್ಷಕರಿದ್ದರು.
ಜಾಮೀಯಾ ನ್ಯಾಷನಲ್ ಪ್ರೌಢಶಾಲೆ : ಸಂಸ್ಥೆಯ ಅಧ್ಯಕ್ಷ ಎಂ.ಬಿ. ಖುರುಬಾನ್ ಅಲಿ ಧ್ವಜಾರೋಹಣ ಮಾಡಿದರು.
ಈ ವೇಳೆ ಕಾರ್ಯದರ್ಶಿ ಫಾಜಿಲ್ ಖಾನ್, ಜಂಟಿ ಕಾರ್ಯದರ್ಶಿ ಕೆ. ರಫೀವುಲ್ಲಾ, ನಿರ್ದೇಶಕರಾದ ಸೈಯದ್ ಶಂಶು ಜಾಮ್, ನಸ್ರುಲ್ಲಾ, ಚಮನ್ ಸಾಬ್, ಷಾ ಅಬ್ರಾರ್, ಮುಖ್ಯ ಶಿಕ್ಷಕ ಮೋಹ್ಮದ್ ಇಲಿಯಾಜ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿದ್ದರು.