ಹರಿಹರದಲ್ಲಿ ಕಳಸಾರೋಹಣಕ್ಕೆ ತರಳಬಾಳು ಜಗದ್ಗುರು ಸಾನ್ನಿಧ್ಯ

ಹರಿಹರದಲ್ಲಿ ಕಳಸಾರೋಹಣಕ್ಕೆ ತರಳಬಾಳು ಜಗದ್ಗುರು ಸಾನ್ನಿಧ್ಯ

ಹರಿಹರ, ಅ.16- ನಗರದ ಹೊರವಲಯದ ಶೇರಾಪುರ ಹನುಮಂತ ದೇವರ ಕಳಸಾರೋಹಣವು ನಾಳೆ ದಿನಾಂಕ 17 ರ ಶನಿವಾರ ಬೆಳಗ್ಗೆ 11 ಗಂಟೆಗೆ  ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಲಿದೆ.

ಹೊಸಭರಂಪುರ ಬಡಾವಣೆಯ ಶ್ರೀ ಗ್ರಾಮ ದೇವತೆ ಊರಮ್ಮ ದೇವಿ ದೇವಸ್ಥಾನದ ಭಕ್ತಾದಿಗಳು ಮತ್ತು ಹೊಸಭರಂಪುರ ಯುವಕ ಸಂಘದ ಯುವಕರು ಕಳಸವನ್ನು ಅದ್ದೂರಿ ಮೆರವಣಿಗೆ ಮೂಲಕ ದೇಣಿಗೆಯಾಗಿ ಶೇರಾಪುರ ಹನುಮಂತ ದೇವರ ದೇವಸ್ಥಾನಕ್ಕೆ ನೀಡಿದರು.

ಈ ಸಂದರ್ಭದಲ್ಲಿ ಬೆಣ್ಣೆ ಸಿದ್ದೇಶ್, ಬೆಣ್ಣೆ ರೇವಣಸಿದ್ದಪ್ಪ, ಅರ್ಚಕರು ನಾಗರಾಜ್, ಎಂ.ಹೆಚ್, ಚಂದ್ರಶೇಖರ್, ಕರಿಬಸಪ್ಪ ಕಂಚಿಕೇರಿ, ಕಣದಾಳ ಶೇಖರಪ್ಪ , ಹಾವನೂರು ಈರಣ್ಣ, ಮಹಾಂತೇಶ್, ಬೇಲೂರು ಈರಣ್ಣ, ಮುರುಗೇಮ್ಮ ಕಣದಾಳ, ವೀರೇಶ್ ದಾವಣಗೆರೆ, ಕೆ.ಬಿ. ಚಂದ್ರು, ವೇದಮೂರ್ತಿ, ಡಿಸ್ ಸ್ವಾಮಿ, ಗಿರೀಶ್ ನೀಲಗುಂದ, ಸಂಜು ಪೂಜಾರ್, ರಾಘವೇಂದ್ರ ಹಾಗೂ ಇತರರು ಹಾಜರಿದ್ದರು. 

error: Content is protected !!