ಸಂಸ್ಕಾರಯುಕ್ತ ಜೀವನ, ಸಾರ್ಥಕ ಜೀವನ

ಸಂಸ್ಕಾರಯುಕ್ತ ಜೀವನ, ಸಾರ್ಥಕ ಜೀವನ

ಸಾಲಕಟ್ಟೆಯ ಕಾರ್ಯಕ್ರಮದಲ್ಲಿ ಕಣ್ವಕುಪ್ಪಿ ಶ್ರೀ ನಾಲ್ವಡಿ ಶಾಂತಲಿಂಗ ಸ್ವಾಮೀಜಿ

ಮಲೇಬೆನ್ನೂರು, ಆ.16- ಸಂಸ್ಕಾರಯುಕ್ತ ಜೀವನ ಸಾರ್ಥಕ ಜೀವನ ಎಂದು ಕಣ್ವಕುಪ್ಪಿ ಗವಿಮ ಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾ ಚಾರ್ಯ ಸ್ವಾಮೀಜಿ ಹೇಳಿದರು. 

ಬುಧವಾರ ಸಾಲಕಟ್ಟೆ ಗ್ರಾಮದಲ್ಲಿ ನೂತನ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಕಳಸಾರೋಹಣ ನೆರವೇರಿಸಿ ನಂತರ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಹಿಂದಿನ ಕಾಲದಲ್ಲಿ ಹಣಕ್ಕೆ ಕೊರತೆ ಇತ್ತೇ ವಿನಃ, ಸುಖ, ಶಾಂತಿ, ನೆಮ್ಮದಿಗೆ ಕೊರತೆ ಇರಲಿಲ್ಲ. ಆದರೆ, ಇಂದು ಹಣ, ಸುಖ ಎಲ್ಲವೂ ಇದ್ದು, ನೆಮ್ಮದಿ ಇಲ್ಲದಂತಾಗಿದೆ.  ಒಬ್ಬರ ಮೇಲೆ ಒಬ್ಬರಿಗೆ ವಿಶ್ವಾಸದ ಕೊರತೆ ಇದ್ದು, ಇದಕ್ಕೆ ಸಂಸ್ಕಾರದ ಕೊರತೆ ಕಾರಣವಾಗಿದೆ. ಮನುಷ್ಯ ಎಷ್ಟೇ ಶ್ರೀಮಂತ, ವಿದ್ಯಾವಂತನಾದರೂ ಸಂಸ್ಕಾರ ಇಲ್ಲದ ಮೇಲೆ ತೃಣಕ್ಕೆ ಸಮಾನ. ಹಾಗಾಗಿ ನಾವು ಮೊದಲು ಸಂಸ್ಕಾರವಂತರಾಗಬೇಕು.

ಮನೆಯಲ್ಲಿ ಹಿರಿಯರು ಮಕ್ಜಳಿಗೆ ಸಂಸ್ಕಾರ ಕಲಿಸಿ, ಸರಿದಾರಿಯಲ್ಲಿ ನಡೆಯುವಂತೆ ಮಾಡಬೇಕು. ಮಕ್ಕಳಿಗೆ ಕಷ್ಟದ ಅರಿವು ಮೂಡಿಸಬೇಕು. ನಮಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದವರೇ ಬಂಧುಗಳು. ನಮ್ಮ ತಪ್ಪನ್ನು ತಿದ್ದಿ ಸರಿದಾರಿಯಲ್ಲಿ ನಡೆಸುವವರು ನಿಜವಾದ ಸ್ನೇಹಿತರು ಎಂದು ಸ್ವಾಮೀಜಿ ತಿಳಿಸಿದರು.

ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ಪುರಾತನ ಕಾಲದಿಂದಲೂ ಭಾರತ ಉಳಿದು ಬಂದಿರುವುದು ದೇವಾಲಯ ಮತ್ತು ಗುರು ಪರಂಪರೆಯಿಂದ. ಇಲ್ಲಿನ ದೇವಾಲಯಗಳಿಂದಾಗಿ ಜನರು  ಧರ್ಮದ ಆಚರಣೆ ಮತ್ತು ಸಂಸ್ಕೃತಿವಂತರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯರಾದ ಡಿ.ಎಂ.ಹಾಲ ಸ್ವಾಮಿ ಮಾತನಾಡಿ, ಸಾಲಕಟ್ಟೆ ದುಶ್ಚಟ ಮುಕ್ತ ಗ್ರಾಮವಾಗಬೇಕು. ಯುವ ಕರು ದುಶ್ಚಟಗಳಿಂದ ದೂರವಿದ್ದು, ಆರೋಗ್ಯವಂತರಾಗುವುದರ ಜೊತೆಗೆ ಮಕ್ಕಳಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.

ಸಾಲಕಟ್ಟೆ ಗ್ರಾ.ಪಂ ಅಧ್ಯಕ್ಷೆ ಲತಾ ಮನೋಹರ್, ಉಪಾಧ್ಯಕ್ಷೆ ಸೌಭಾಗ್ಯಮ್ಮ, ಸದಸ್ಯರಾದ ದೀಪಾ ನಿರಂಜನ್, ಜ್ಯೋತಿ ನಾಗರಾಜ್, ಅನುಪಮ ಸಿದ್ದಪ್ಪ, ಮುಖಂಡರಾದ ಟಿ.ಹುಚ್ಚೆಂಗೆಪ್ಪ, ತರೇದಹಳ್ಳಿ ಸಿದ್ಪಪ್ಪ, ಎಂ.ಚಿಕ್ಕವೀರಪ್ಪ, ಆರ್.ಸಿ.ಬಸವರಾಜಪ್ಪ, ಬಿ.ರೇವಣಸಿದ್ದಪ್ಪ, ಬಾಳೆಕಾಯಿ ನಾಗಪ್ಪ, ಇಟಗಿ ಸುಭಾಸಪ್ಪ, ಟಿ.ಎಂ.ಮಹೇಶ್ವರಯ್ಯ, ಡಿ.ಎಂ.ಜಯದೇ ವಯ್ಯ, ಡಿ.ಹೆಚ್.ರೇವಣಸಿದ್ದಪ್ಪ, ಎಳೆಹೊಳೆ ನಿಂಗಪ್ಪ, ಉಪ್ಪಾರ ಶರಣಪ್ಪ, ಎಸ್.ಜಿ.ಮಂಜುನಾಥ, ಕೆಂಗನಹಳ್ಳಿ ಚಂದ್ರಪ್ಪ, ಎಂ.ಜಿ. ಮಂಜುನಾಥ, ಬಣಕಾರ್ ವಿಶ್ವನಾಥ, ಕೆ.ಎನ್.ಮಂಜುನಾಥ, ಎಂ.ನಿಜಗುಣ, ಕೆ.ವೈ.ಮಾಲತೇಶ, ಎ.ಕೆ.ಪಂಚಪ್ಪ, ವಿ.ವೆಂಕಟರಾವ್, ಟಿ.ಹೆಚ್.ಶಿವಣ್ಣ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ   ಶಾಸಕರಾದ ಬಿ.ಪಿ. ಹರೀಶ್ ಉಪಸ್ಥಿತರಿದ್ದರು. ಶಿಕ್ಷಕ ಡಿ.ಎಂ.ಮಂಜುನಾಥಯ್ಯ ಸ್ವಾಗತಿಸಿದರು. ಶಿಕ್ಷಕ ಆರ್.ಬಿ.ಮಲ್ಲಿಕಾರ್ಜುನ ಕಾರ್ಯಕ್ರಮ ನಿರೂಪಿಸಿದರು.

error: Content is protected !!