ದಾವಣಗೆರೆ, ಆ.12 ದಾವಣಗೆರೆ ವಿವಿ ರಸಾಯನಶಾಸ್ತ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಡಿ.ಎಂ. ತೇಜಸ್ವಿನಿ ಅವರು ರಾಜಸ್ತಾನದ ಚರು ನಗರದ ಲೋಹಿಯಾ ಸರ್ಕಾರಿ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
‘ನೀರಿನಲ್ಲಿರುವ ಆರ್ಸೆನಿಕ್ ಅಂಶವನ್ನು ಸುಲಭವಾಗಿ ಪತ್ತೆ ಮಾಡಲು ನಾನೊಫರ್ರಿಟ್ ತಂತ್ರಜ್ಞಾನದ ಬಳಕೆ’ ಕುರಿತು ತೇಜಸ್ವಿನಿ ಪ್ರಬಂಧ ಮಂಡಿಸಿದ್ದರು. ರಸಾಯನಶಾಸ್ತ ವಿಭಾಗದ ಪ್ರಾಧ್ಯಾಪಕ ಪ್ರೊ.ಎಚ್.ಪಿ ನಾಗಸ್ವರೂಪ ಅವರ ಮಾರ್ಗದರ್ಶನ ಮತ್ತು ಜೈನ ಕಾಲೇಜಿನ ನಿರ್ದೇಶಕ ಪ್ರೊ.ಮಂಜಪ್ಪ ಸಾರಥಿ ಅವರ ಸಲಹೆಯಂತೆ ಪ್ರಬಂಧ ಸಿದ್ಧಪಡಿಸಿದ್ದರು. ತೇಜಸ್ವಿನಿ ಅವರನ್ನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ, ಕುಲಸಚಿವ ಪ್ರೊ.ಯು.ಎಸ್.ಮಹಾಬಲೇಶ್ವರ ಅವರು ಅಭಿನಂದಿಸಿದ್ದಾರೆ.