ಹಳ್ಳಿ ಸೊಗಡಿನ ಗ್ರಾಮೋತ್ಸವ ಕಾರ್ಯಕ್ರಮದಲ್ಲಿ ಕೆ. ಪ್ರವೀಣ
ದಾವಣಗೆರೆ, ಆ. 8 – ಮಕ್ಕಳು ರಜಾ ದಿನಗಳಲ್ಲಿ ಅಜ್ಜ-ಅಜ್ಜಿ ಮನೆಗೆ ಹೋಗಿ ಹಳ್ಳಿಯ ಸುಂದರ ವಾತಾವರಣವನ್ನು ಆನಂದಿಸಬೇಕು ಎಂದು ದಾವಣಗೆರೆ ಸ್ವದೇಶ ಕಂಪನಿ ಕಾರ್ಯನಿರ್ವಾಹಕ ಅಧಿಕಾರಿ ಕೆ. ಪ್ರವೀಣ ವಿದ್ಯಾರ್ಥಿಗಳಿಗೆ ಹೇಳಿದರು.
ನಗರದ ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಹಳ್ಳಿ ಸೆೋಗಡಿನ ಗ್ರಾಮೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿ,
ಶಾಲೆಯಲ್ಲಿ ವಿದ್ಯಾರ್ಥಿಗಳು ಬಣ್ಣ ಬಣ್ಣದ ವಸ್ತ್ರಗಳನ್ನು ಧರಿಸಿ, ಹಳ್ಳಿಯ ವಾತಾವರಣವನ್ನು ಅನಾವರಣ ಗೆೋಳಿಸಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ. ಗ್ರಾಮೀಣ ಸಂಸ್ಕೃತಿಯನ್ನು ನೆನಪು ಮಾಡಿದ್ದಕ್ಕೆ ಧನ್ಯವಾದ ಹೇಳಿದರು.
ಶಾಲಾ ಮುಖ್ಯಸ್ಥರಾದ ಮಂಜುನಾಥ ರಂಗರಾಜು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಶಾಲೆಯಲ್ಲಿ ಪಾಠಕ್ಕೆ ಸೀಮಿತವಾಗದೇ, ದೇಶದ ಸಂಸ್ಕೃತಿಯನ್ನು ಬಿಂಬಿಸುವಂತಹ ಹಳ್ಳಿ ಸೆೋಗಡಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಶಾಲಾ ಪ್ರಾಂಶುಪಾಲರಾದ ಜೆ.ಎಸ್. ವನಿತಾ ಮಾತನಾಡಿ, ಹಳ್ಳಿ ಸೆೋಗಡನ್ನು ಬಿಂಬಿಸುವಂತಹ ಕಾರ್ಯಕ್ರಮಗಳು ಇಂದಿನ ಮಕ್ಕಳಿಗೆ ಅವಶ್ಯಕ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕೋಲು ಕುಣಿತ, ಕೋಲಾಟ, ಕಂಸಾಳೆ, ವೀರಗಾಸೆ, ಮಲೆ ಮಾದೇಶ್ವರನ ಹಾಡು, ರೈತರು ಒಕ್ಕಲು ಮಾಡುವ ಗೀತೆಗಳು, ಜಾನಪದ ಹಾಗೂ ಸುಗ್ಗಿ ಹಾಡು, ನೃತ್ಯಗಳೆೋಂದಿಗೆ ಸಾಂಸ್ಕೃತಿಕ ಮನರಂಜನೆ ನೀಡಿದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಮುಖ್ಯಸ್ಥ ವಾಸಿಮ್ ಪಾಷಾ.ಎಂ, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಶೀಭಾರಾಣಿ, ಪ್ರಭು ಪಿ.ವಿ, ಸವಿತಾ.ಆರ್ ಶಿಕ್ಷ ಕ ವರ್ಗದವರು ಉಪಸ್ಥಿತರಿದ್ದರು.