ರಾಣೇಬೆನ್ನೂರು, ಆ. 7- ತಾಲ್ಲೂಕಿನ ಪತ್ತೇಪುರ ಗ್ರಾಮದಲ್ಲಿ ವಿದ್ಯುತ್ ತಗುಲಿ ತಂದೆ ಮಗ ಸಾವನ್ನಪ್ಪಿದ ದುರಾದೃಷ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಭತ್ತದ ಬೆಳೆಗೆ ನೀರು ಹಾಯಿಸಲು ಹೊಲಕ್ಕೆ ತೆರಳಿದ ತಂದೆ ಕರಬಸಪ್ಪ ಕಡೇನಾಯ್ಕನಹಳ್ಳಿ ಹಾಗೂ ಮಗ ದರ್ಶನ್ ಅವರುಗಳು ಮೋಟಾರು ಚಾಲೂ ಮಾಡುತ್ತಿದ್ದಂತೆ ವಿದ್ಯುತ್ ತಗಲಿ ಒಬ್ಬರ ಮೇಲೊಬ್ಬರು ಬಿದ್ದು ಮೃತಪಟ್ಟಿದ್ದಾರೆ. ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕರ ಭೇಟಿ: ಶಾಸಕ ಪ್ರಕಾಶ ಕೋಳಿವಾಡ ಅವರು ಅಧಿಕಾರಿಗಳೊಂದಿಗೆ ದುರ್ದೈವಿಗಳ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ, ಸರ್ಕಾರದ ಸಹಾಯ ಕುರಿತು ಪ್ರಯತ್ನ ನಡೆಸುವುದಾಗಿ ತಿಳಿಸಿದರು.