ಸಂತೇಬೆನ್ನೂರು, ಆ. 5- ಇಲ್ಲಿನ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಊರಿನ ದೇವಸ್ಥಾನಗಳ ಅರ್ಚಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೇವಾ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಮಮತ ಮಾತನಾಡಿ, ನಮ್ಮ ದೇಶದ ಸನಾತನ ಧರ್ಮದ ಸಂಸ್ಕೃತಿಯನ್ನು ಇದುವರೆಗೂ ಉಳಿಸಿಕೊಂಡು ಬಂದಿರುವ ಕಾರಣ ಜನರು ಶ್ರದ್ಧೆ, ಭಕ್ತಿ, ಪೂಜೆ, ಧ್ಯಾನವನ್ನು ಮಾಡುತ್ತಾ, ತಮ್ಮ ಸಂಕಷ್ಟವನ್ನು ಮರೆಯುತ್ತಾ ಪರಮಾತ್ಮನಲ್ಲಿ ವಿಶ್ವಾಸವಿಟ್ಟು ನಡೆಯುತ್ತಿದ್ದಾರೆ ಎಂದರು.
ಅರ್ಚಕರು ಸಮಾಜ ಸೇವೆ ಮಾಡುತ್ತಾ ಎಲ್ಲರ ಒಳಿತನ್ನು ಬಯಸುತ್ತಾ ಬಂದಿದ್ದಾರೆ. ಜನರೊಳಗಿನ ಶ್ರದ್ಧಾ-ಭಕ್ತಿ, ಪೂಜೆ, ಧ್ಯಾನಕ್ಕೆ ಅರ್ಚಕರ ಕಾಯಕ ನಿಷ್ಠೆಯೇ ಕಾರಣ. ಭಕ್ತ ಸಮೂಹ ತಮ್ಮ ಸಂಕಷ್ಟ ಮರೆಯುತ್ತಾ ಪರಮಾತ್ಮನಲ್ಲಿ ವಿಶ್ವಾಸ ಹೊಂದಿ ಹೊಸ ಜೀವನ ನಡೆಸಲು ಅರ್ಚಕರ ಸೇವೆ ಪ್ರೇರಣದಾಯಕ ಎಂದು ಅವರು ಶ್ಲ್ಯಾಘಿಸಿದರು.
ಅರ್ಚಕರುಗಳಾದ ಸದಾಶಿವಚಾರ್, ರುದ್ರಸ್ವಾಮಿ, ಮಹೇಶ್ವರಪ್ಪ, ಬಸವರಾಜಪ್ಪ, ವೀರಭದ್ರಾಚಾರ್, ಗಂಗಾಧರ್, ಉಮೇಶ್, ಆನಂದಮೂರ್ತಿ, ಶ್ರೀಮತಿ ಅನಿತಾ, ಸುಶೀಲಮ್ಮ ಅವರುಗಳನ್ನು ಶಾಲು ಹೊದಿಸಿ ಸನ್ಮಾನಿಸುವುದರ ಮೂಲಕ ಅಭಿನಂದಿಸಲಾಯಿತು.