ಹರಿಹರ, ಆ. 5- ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ರಾಜ್ಯ ಬಿಜೆಪಿ ಬೆಂಗಳೂರಿನಿಂದ ಮೈಸೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಹರಿಹರದ ಬಿಜೆಪಿ ನಗರ ಮತ್ತು ಗ್ರಾಮಾಂತರ ಘಟಕಗಳ ಕಾರ್ಯಕರ್ತರು ಬೆಂಬಲಿಸಿ ಭಾಗವಹಿಸಿದ್ದರು.
ಮೂಡಾ ಹಗರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ನಡೆದಿರುವ ಪಾದಯಾತ್ರೆಯಲ್ಲಿ ಹರಿಹರ ಶಾಸಕ ಬಿ.ಪಿ ಹರೀಶ್, ಚಂದ್ರಶೇಖರ ಪೂಜಾರ್, ನಗರಾಧ್ಯಕ್ಷ ಅಜಿತ್ ಸಾವಂತ್, ಮುಖಂಡರಾದ ರಾಜು ರೋಖಡೆ, ಸಂತೋಷ ಗುಡಿಮನಿ, ಗಿರೀಶ್ ಹಳ್ಳದಕೇರಿ, ಸ್ವಾತಿ ಹನುಮಂತಪ್ಪ, ಫೋಟೋ ಸಂತೋಷ, ಅಂಜಿನಿ ಗುತ್ತೂರು, ನಿರಂಜನ್ ದೀಟೂರು, ಚಂದ್ರು ಪಾಟೀಲ, ಗಣೇಶ್ ಶಿವಾಜಿ ಅನೇಕರು ಭಾಗವಹಿಸಿದ್ದರು.