ದಾವಣಗೆರೆ, ಆ. 5- ಭದ್ರಾ ನದಿಯಲ್ಲಿ 16050 ಕ್ಯೂಸೆಕ್ಸ್ ಒಳ ಹರಿವು ಇದ್ದು, ನಾಲೆಗಳಿಗೆ 3000 ಕ್ಯೂಸೆಕ್ಸ್ ನೀರು ಬಿಡುತ್ತಿದ್ದಾರೆ. ಅಣೆಕಟ್ಟಿನಲ್ಲಿ 180 ಅಡಿ ನೀರಿದೆ. ಅಣೆಕಟ್ಟಿಗೆ ಇನ್ನೂ 7 ಟಿಎಂಸಿ ನೀರಿನ ಅಗತ್ಯತೆ ಇದೆ.
ಅಧಿಕಾರಿಗಳು ಕ್ರಸ್ಟ್ ಗೇಟು ಮೂಲಕ 15555 ಕ್ಯೂಸೆಕ್ಸ್ ನೀರನ್ನು ನದಿಗೆ ನಿಡುತ್ತಿದ್ದು, ನಿಲ್ಲಿಸುವಂತೆ ಕಾಡಾ ಅಧ್ಯಕ್ಷರೂ, ಅಧೀಕ್ಷಕ ಇಂಜಿನಿಯರ್ಗೆ ದೂರವಾಣಿ ಮೂಲಕ ತಿಳಿಸಿದಾಗ್ಯೂ ಮೇಲಿನವರು ಸಬೂಬು ಹೇಳುತ್ತಿದ್ದಾರೆ.
ಶಿವಮೊಗ್ಗ ಜಿಲ್ಲಾ ಮಂತ್ರಿಗಳಿಗೆ ದೂರವಾಣಿಯಲ್ಲಿ ಸಂಪರ್ಕಿಸಿದರೆ ಕರೆಯನ್ನು ಸ್ವೀಕರಿಸುತ್ತಿಲ್ಲ. ನೀರಾವರಿ ಮಂತ್ರಿಗಳೂ ಕೂಡಲೇ ಇತ್ತ ಗಮನಿಸಿ ಕ್ರಸ್ಟ್ ಗೇಟ್ ಇಳಿಸಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಹೆಚ್.ಆರ್. ಲಿಂಗರಾಜ್ ಎಚ್ಚರಿಸಿದ್ದಾರೆ.