ನೀರಿನ ಹರಿವು ಕಡಿಮೆಯಾದರೂ ಇಳಿಮುಖವಾಗದ ವೀಕ್ಷಕರು

ನೀರಿನ ಹರಿವು ಕಡಿಮೆಯಾದರೂ ಇಳಿಮುಖವಾಗದ ವೀಕ್ಷಕರು

ಹರಿಹರ, ಅ.5- ನಗರದ ತುಂಗಭದ್ರಾ ನದಿಯಲ್ಲಿ ಸ್ವಲ್ಪ ಮಟ್ಟಿಗೆ ನೀರಿನ ಪ್ರಮಾಣ ಕಡಿಮೆ ಆಗಿದ್ದು, ಆದರೆ  ನದಿಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೆ ಆಟ ಆಡಿಸೋದು,  ಯುವಕ-ಯುವತಿಯರು ಸೆಲ್ಪಿ ಪೋಟೋ ತೆಗೆಸಿಕೊ ಳ್ಳುವುದು ಮಾತ್ರ ನಿಲ್ಲದೇ ನಡೆಯುತ್ತಿರುವುದರಿಂದ ಅನಾಹುತಗಳಿಗೆ ದಾರಿಯಾಗಿದೆ.

ಕಳೆದ 1 ವಾರದಿಂದ ನಗರದ ತುಂಗಭದ್ರಾ ನದಿಯು ಮೈದುಂಬಿಕೊಂಡು ಹರಿಯುತ್ತಿತ್ತು. ಜಿಲ್ಲೆಯಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ನದಿ ವೀಕ್ಷಿಸಿದರು. 

ಆದರೆ ನಿನ್ನೆಯಿಂದ ತುಂಗಭದ್ರಾ ನದಿಯ ನೀರಿನ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ. ಆದರೆ ನದಿ ನೀರು ಕಡಿಮೆ ಆಗುತ್ತಿದ್ದಂತೆ ಪೊಲೀಸ್ ಇಲಾಖೆ ವತಿಯಿಂದ ನದಿ ಪಾತ್ರದಲ್ಲಿ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿಗಳನ್ನು ಬೇರೆ ಕೆಲಸಕ್ಕೆ ನಿಯೋಜಿಸಿದ ಪರಿಣಾಮ ನದಿಯಲ್ಲಿ ಯಾರು ಓಡಾಡದಂತೆ ಓರ್ವ ಟೂರಿಂಗ್ ಪೊಲೀಸ್ ಸಿಬ್ಬಂದಿಯನ್ನು ನಗರದ ತುಂಗಾರತಿ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. 

ಒಬ್ಬರಿಂದ ಕೆಲಸ ನಿಭಾಯಿಸಲು ಕಷ್ಟ ಆಗುತ್ತಿದ್ದು, ಇತ್ತ ಸಾರ್ವಜನಿಕರು ನದಿ ವೀಕ್ಷಣೆಗೆ ಬರುವ ಚಿಕ್ಕ ಮಕ್ಕಳು, ಸಾರ್ವಜನಿಕರು, ನೀರಿನಲ್ಲಿ ಆಟವಾಡುವವರನ್ನು ಮತ್ತು ಸೆಲ್ಫಿ ತೆಗೆದುಕೊಳ್ಳುವವರನ್ನು ತಡೆಯಲು ಸಾಧ್ಯವಾಗದು. ಈ ಸ್ಥಳದಲ್ಲಿ ಸ್ವಲ್ಪ ಯಾಮಾರಿದ್ರು ನದಿಯಲ್ಲಿ ಅನಾಹುತ ಸಂಭವಿಸಿ ಸಾವಿನಡೆಗೆ ತೆಗೆದುಕೊಂಡು ಹೋಗುವ ಸಂಭವ ಜಾಸ್ತಿ.

ನದಿ ನೀರಿನ ಪ್ರಮಾಣ ಕಡಿಮೆ ಆಗುತ್ತಿದ್ದಂತೆ, ಇತ್ತ ನದಿಯಲ್ಲಿ  ಎಂಟು ಹಲ್ಲಿನ ಕುರಿಯೊಂದು ಹರಿದು ಬಂದು ನದಿಯ ದಂಡೆಯ ಮೇಲೆ ತೇಲುತ್ತಿದೆ. ಈ ಕುರಿ ಅಂದಾಜು ಎಂಬತ್ತು ಸಾವಿರ ರೂ. ವೆಚ್ಚ ಇರಬಹುದು ಎನ್ನಲಾಗಿದೆ. 

ನದಿಯಲ್ಲಿ ಸೆಲ್ಪಿ ಫೋಟೋ ತೆಗೆಯುವಾಗ ಕೈಯಲ್ಲಿದ್ದ ಮೊಬೈಲ್ ನದಿಯಲ್ಲಿ ಬಿದ್ದ ಪರಿಣಾಮ ಯುವಕನೋರ್ವ ನದಿಯಲ್ಲಿ ಇಳಿದು ಮೊಬೈಲ್ ಹುಡುಕಲು ಮುಂದಾದ್ರು ಸಹಿತ ಮೊಬೈಲ್ ಸಿಗದೆ ಮನೆಗೆ ನಿರಾಸೆಯಿಂದ ಮನೆಗೆ ಹೋದ ಘಟನೆ ಕೂಡ ನಡೆಯಿತು. 

error: Content is protected !!