ದಾವಣಗೆರೆ, ಆ. 5- ಸಮೀಪದ ಬಾಡಾ ಕ್ರಾಸ್‌ನಲ್ಲಿರುವ ಜೈನ್ ಪಬ್ಲಿಕ್ ಶಾಲೆಯಲ್ಲಿ ಗುರು ಪೂರ್ಣಿಮೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಕ್ಕಳು ಭಾರತೀಯ ಸಂಸ್ಕೃತಿಯಂತೆ ಎಲ್ಲಾ ಧರ್ಮದ ಗುರುಗಳ ವೇಷಭೂಷಣವನ್ನು ಧರಿಸಿಕೊಂಡು, ಗುರುಗಳ ಮಹತ್ವವನ್ನು ಅವರ ಮುದ್ದು ಮುದ್ದಾದ ಮಾತುಗಳಿಂದ ಎಲ್ಲಾ ಪೋಷಕರ ಮನ ಸೆಳೆದರು. ಜೈನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ಅಧ್ಯಕ್ಷ ಅಚಲ್ ಚಂದ್ ಜೈನ್ ಮುಖ್ಯ ಅತಿಥಿಯಾಗಿದ್ದರು. ಶಾಲೆಯ ಪ್ರಾಂಶುಪಾಲ ಎಸ್. ನಟರಾಜ್ ಮತ್ತು ಉಪ ಪ್ರಾಂಶುಪಾಲರಾದ ಎಸ್.ಕೆ. ಯಶೋಧರ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಲೆಯ 8ನೇ ತರಗತಿ ಮಕ್ಕಳಾದ ಸ್ವಾತಿ ತ್ರಿಪಾಠಿ, ಸೃಜನ್, ಮೇಘನಾ, ಅಧಿತಿ ಮತ್ತು ರಿತಿ ಜೈನ್ ನಡೆಸಿಕೊಟ್ಟರು.