ಮೀನುಗಾರರ ಆರೋಗ್ಯ ರಕ್ಷಣೆಗೆ ಸಹಕಾರಿ ಯಶಸ್ವಿನಿ ಯೋಜನೆ

ಮೀನುಗಾರರ ಆರೋಗ್ಯ ರಕ್ಷಣೆಗೆ ಸಹಕಾರಿ ಯಶಸ್ವಿನಿ ಯೋಜನೆ

ಹರಪನಹಳ್ಳಿ. ಆ. 5 – ಬಡ ಮೀನುಗಾರನ ಬದುಕು ವಿಪತ್ತಿನಲ್ಲಿದ್ದಾಗ ಸಹಕಾರಕ್ಕೆ ಬರುವುದೇ ಯಶಸ್ವಿನಿ ಯೋಜನೆ ಎಂದು ಜಿಲ್ಲಾ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಷಡಕ್ಷರಪ್ಪ  ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯತಿ ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಜಿಲ್ಲಾ ಪಂಚಾಯತ್ ವಿಜಯನಗರ. ಮೀನುಗಾರಿಕೆ ಇಲಾಖೆ ಹರಪನಹಳ್ಳಿ ವತಿಯಿಂದ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಬಗ್ಗೆ ಮೀನು ಕೃಷಿಕರು ಮತ್ತು ಮೀನುಗಾರರ ಸಹಕಾರ ಸಂಘದ ಸದಸ್ಯರ  ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯಶಸ್ವಿನಿ ಯೋಜನೆ ನಗದು ರಹಿತ ಆರೋಗ್ಯ ವೆಚ್ಚಕ್ಕಾಗಿ ಇರುವಂತಹ ಮಹತ್ತರ ಯೋಜನೆಯಾಗಿದೆ.  ಪ್ರತಿಯೊಬ್ಬ ಮೀನುಗಾರರ ಬದುಕಿಗೆ ಭದ್ರ ಬುನಾದಿಯಾಗಲಿರುವ ಆರೋಗ್ಯ ವೆಚ್ಚಕ್ಕಾಗಿ ಐದು ಲಕ್ಷದವರೆಗೆ ದೊರೆಯಲಿರುವ ಯೋಜನೆ ಸದ್ಬಳಕೆಯಾಗಲೇಬೇಕು ಎಂದು ಹೇಳಿದರು.

ಜಿಲ್ಲಾ ಉಪನಿರ್ದೇಶಕ ಶಿವಣ್ಣ ಮಾತನಾಡಿ, ಕಾನೂನು ಬದ್ಧ ಸಹಕಾರ ಸಂಘಗಳಿಗೆ ಮಾತ್ರ ಸರ್ಕಾರಿ ಸೌಲಭ್ಯಗಳು ದೊರೆಯಲಿವೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಧಿಕಾರಿ ಚಂದ್ರಶೇಖರ್ ಮಾತನಾಡಿ. ಆರೋಗ್ಯವಂತ, ಉತ್ಕೃಷ್ಟ ಆಹಾರ ಮೀನು, ಮಾಂಸಾಹಾರಿಗಳಿಗೆ ಅತ್ಯಂತ ಸರಳ ಮತ್ತು ಉತ್ತಮ ಆರೋಗ್ಯದ ಆಹಾರವಾಗಿದೆ  ಎಂದು ತಿಳಿಸಿದರು.

ಮೀನುಗಾರಿಕೆ ಸಹಾಯಕ ನಿರ್ದೇಶಕ ಮಾಲವಿ ರಿಯಾಜ್ ಅಹ್ಮದ್ ಉಪನ್ಯಾಸ ನೀಡಿದರು. ಹರಪನಹಳ್ಳಿ ಸಹಾಯಕ ನಿರ್ದೇಶಕ ಮಂಜುನಾಥ್, ಸಹಕಾರ ಸಂಘಗಳ ನೋಂದಣಿ ಕಚೇರಿಯ ಹಿರಿಯ ನಿರೀಕ್ಷಕರಾದ ಬಸಮ್ಮ ಬಡಿಗೇರ್, ಮೀನುಗಾರಿಕೆ ಇಲಾಖೆ ಸಾವಿತ್ರಮ್ಮ, ಖಾಜಾ ಹುಸೇನ್, ನೀಲಪ್ಪ, ನಾಗೇಂದ್ರಪ್ಪ,  ಸಹಕಾರ ಸಂಘಗಳ ಪದಾಧಿಕಾರಿಗಳಾದ ಎನ್. ರವಿ, ತಿಮ್ಮಣ್ಣ, ಎನ್.ಪಿ. ಸಿದ್ದೇಶ್, ಅಂಬಿ ರಾಜಪ್ಪ, ಬಿ. ಶಿವಪ್ಪ, ದ್ಯಾಮಜ್ಜಿ ಹನುಮಂತಪ್ಪ, ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!