ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಪ್ಲಾನ್ ಮಾಡಿಕೊಳ್ಳಬೇಕು

ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಪ್ಲಾನ್ ಮಾಡಿಕೊಳ್ಳಬೇಕು

ಮಾಧ್ವ ಪರಿಷತ್ತಿನ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸರ್ಎಂವಿ ಕಾಲೇಜಿನ ಸಂಸ್ಥಾಪಕ ಎಸ್‌.ಜಿ. ಶ್ರೀಧರ್ ಕಿವಿಮಾತು

ದಾವಣಗೆರೆ, ಆ. 5 – ವಿದ್ಯಾರ್ಥಿಗಳು ತಾವು ಯಾವುದನ್ನು ಅಭ್ಯಾಸ ಮಾಡಬೇಕೆಂದು ಪ್ಲಾನ್ ಮಾಡಿಕೊಳ್ಳಬೇಕು. ತಮ್ಮ ಅಭ್ಯಾಸವು ಪರಿಶ್ರಮ ದಲ್ಲಿ ಬಹಳ ಮುಖ್ಯ, ಮುಂದಿನ ಒಳ್ಳೆಯ ಗುರಿ ಯನ್ನು ಸಾಧಿಸಬೇಕೆಂದು ಸರ್ಎಂವಿ ಕಾಲೇಜಿನ ಸಂಸ್ಥಾಪಕ ಎಸ್‌.ಜಿ. ಶ್ರೀಧರ್ ಕರೆ ನೀಡಿದರು.

ಸ್ಥಳೀಯ ಪಿ.ಜೆ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಭಾಂಗಣದಲ್ಲಿ ವಿಶ್ವ ಮಾಧ್ವ ಮಹಾ ಪರಿಷತ್ ವತಿಯಿಂದ ನಿನ್ನೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. 

ತಮ್ಮ ವಿದ್ಯಾರ್ಥಿ ಜೀವನವನ್ನು ಮಕ್ಕಳೊಂದಿಗೆ ಹಂಚಿಕೊಂಡ  ಅವರು,   ನಾನು ಪ್ರತಿ ದಿವಸ ಏನು ಕೆಲಸ ಮಾಡಬೇಕೆಂದು ನೋಟ್ ಮಾಡಿಕೊಳ್ಳುತ್ತಿದ್ದೆ, ಡೈರಿಯನ್ನೂ ಸಹ ಬರೆಯುತ್ತಿದ್ದೆ, ಸರ್‌ ಎಂ. ವಿಶ್ವೇಶ್ವರಯ್ಯನವರ  ಜೀವನ ಹಾಗೂ ಅವರು ನಡೆದ ದಾರಿಯನ್ನಲ್ಲದೇ ಸಾಧನೆಗಳನ್ನು ವಿವರಿಸುವುದರೊಂದಿಗೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. 

ಮತ್ತೋರ್ವ ಅತಿಥಿಯಾಗಿದ್ದ ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕ ಹಾಗೂ ಬ್ರಾಹ್ಮಣ ಸಮಾಜದ ಮುಖಂಡ ಡಾ. ಸಂಪನ್ನ ಮುತಾಲಿಕ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ನಾನು ಇಂಜಿನಿಯರ್, ಡಾಕ್ಟರ್ ಆಗಬೇಕೆಂದುಕೊಳ್ಳದೇ, ಬೇರೆ ಬೇರೆ ಒಳ್ಳೆಯ ಅವಕಾಶ ಇರುತ್ತದೆ. ಅದರ ಕಡೆಗೆ ಗಮನಹರಿಸಿ ಯಾವತ್ತೂ ಸೋಲಿಗೆ ಹೆದರಬೇಡಿ. ಮೊದಲು ನಮಗೆಲ್ಲ ಮುಂದೆ ಗುರಿ ಹಿಂದೆ ಗುರುಗಳು ಇದ್ದರು, ತಮ್ಮ ಯಾವುದೇ ಅಭ್ಯಾಸದಲ್ಲಿ ಪರಿಶ್ರಮ ಬಹಳ ಮುಖ್ಯ ಎಂದು ಹೇಳಿ ನಮ್ಮ ಬ್ರಾಹ್ಮಣ ಸಂಪ್ರದಾಯವನ್ನು ಮರೆಯಬೇಡಿರಿ, ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ಯಾವುದೇ ಆಶ್ರಮಕ್ಕೆ ಸೇರಿಸಬೇಡಿ ಎಂದು  ನೇರವಾಗಿ ಅರ್ಥವಾಗುವಂತೆ ಹೇಳಿದರು. 

ಇದೇ ಸಂದರ್ಭದಲ್ಲಿ ಡಾ. ಗೋಪಾಲ ಅಡವಿರಾವ್ ಮುತ್ತಗಿ, ಎನ್.ಕೆ. ಕೃಷ್ಣಮೂರ್ತಿ, ಮಠದ ವ್ಯವಸ್ಥಾಪಕ ರಾಮಗೋಪಾಲ್ ಸಹ ಮಾತನಾಡಿದರು.

ಪುರಸ್ಕಾರದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ 23-24ನೇ ಸಾಲಿನ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳು ಶೇ. 95 ಬಂದಿರುವ ಎಸ್. ತನ್ಮಯಿ, ಎಂ. ಶ್ರೀಕರ ರಾವ್, ಎಂ. ಸಿಂಚನ, ಎನ್. ಶ್ರಾವ್ಯ, ಎಸ್‌.ಎಂ. ಐಶ್ವರ್ಯ, ಎಂ. ರಚನಾ ದಾಸ್, ಪಿ.ಎಸ್. ಲಾಸ್ಯ, ಎಸ್. ಸಾನ್ನಿಧ್ಯ ಭಟ್, ಶ್ರೀಗೌರಿ ಎಸ್, ವಸಂದರ ಹೆಗಡೆ, ಹೆಚ್. ಸಾಯಿ ತೇಜಸ್ , ಎಸ್.  ಸಂಪ್ರೀತ, ಎಸ್. ಸಮ್ಮಿತಾ ಮುತಾಲಿಕ್ ಅಮೋಘ, ಬಿ. ಅವರುಗಳನ್ನು ಸನ್ಮಾನಿಸಿ ಗೌರವಿಸಿದರು. 

ಪ್ರತಿಭಾ ಪುರಸ್ಕಾರಕ್ಕೆ ಸುತೀರ್ಥ ಕಟ್ಟಿ, ಬೆಂಗಳೂರಿನ ಡಾ. ಎಂ.ಎಸ್. ಹರ್ಷ, ಹುಬ್ಬಳ್ಳಿಯ ಡಾ. ವೆಂಕಟರಾವ್ ಅವರು ಹೆಚ್ಚಿನ ಸಹಕಾರ ನೀಡಿರುತ್ತಾರೆ.  

ಜ್ಯೋತಿಷ್ಯ ತಜ್ಞ ಜಯತೀರ್ಥಾಚಾರ್ ಅವರು ವೇದ ಘೋಷ ಮಾಡಿದರು. ಕು. ಸಮ್ಮಿತಾ, ಮುತಾಲಿಕ್ ಪ್ರಾರ್ಥನೆ ಮಾಡಿದರು. ಕೆಎಫ್ಎಸ್ಸಿ ನಾಗರಾಜ್ ಸ್ವಾಗತಿಸಿದರು, ಕೃಷ್ಣ ಚಾರ್ ಮಣ್ಣೂರ್ ಕಾರ್ಯಕ್ರಮವನ್ನು ನಿರೂಪಿ ಸಿದರು, ಬಿ.ಡಿ. ವೆಂಕಟಗಿರಿ ವಂದಿಸಿದರು.

error: Content is protected !!