ನಿರುದ್ಯೋಗಿ ಯುವಕರ ಸಂಕಷ್ಟ ಬಜೆಟ್ : ಪ್ರವೀಣ್ ನಿಟುವಳ್ಳಿ

ನಿರುದ್ಯೋಗಿ ಯುವಕರ ಸಂಕಷ್ಟ ಬಜೆಟ್ : ಪ್ರವೀಣ್ ನಿಟುವಳ್ಳಿ

ದಾವಣಗೆರೆ, ಆ. 5- ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ 2024 -25 ರ ಆರ್ಥಿಕ ವರ್ಷದ ಬಜೆಟ್ ನಿರುದ್ಯೋಗಕ್ಕೆ ಶಾಶ್ವತ ಪರಿಹಾರ ರೂಪಿಸುವಲ್ಲಿ ವಿಫಲವಾಗಿದೆ ಎಂದು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ನಿಟುವಳ್ಳಿ ಟೀಕಿಸಿದ್ದಾರೆ. ಜನ ವಿರೋಧಿಯಾದ ಈ ಬಜೆಟ್ ಕುರಿತು ಹೇಳಿಕೆ ನೀಡಿರುವ  ಅವರು, ದೇಶದ ಜನರು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ. 

ಸಂವಿಧಾನದ ಮೂಲಭೂತ ತತ್ವಗಳಾದ ಆರ್ಥಿಕ ಸಮೀಕ್ಷೆ ವರದಿಯು ದೇಶವು ನಿರುದ್ಯೋಗ ಸಮಸ್ಯೆ ಎದುರಿಸಲು ಸಾಧ್ಯವಾಗಲು ಕೃಷಿಯೇತರ ವಲಯದಲ್ಲಿ ವಾರ್ಷಿಕವಾಗಿರುವ ಸುಮಾರು 78.51 ಲಕ್ಷ ಉದ್ಯೋ ಗಗಳನ್ನು ಸೃಷ್ಠಿಸುವ ಅಗತ್ಯವಿದೆ ಎಂದು ಸೂಚಿಸುತ್ತದೆ ಎಂದಿದ್ದಾರೆ. 

error: Content is protected !!