ಜಗಳೂರು, ಆ. 3 – ತಾಲ್ಲೂಕಿನ ರೇಷ್ಮೆ ಇಲಾಖೆಯ ತಾಂತ್ರಿಕ ಸಲಹಾ ಕೇಂದ್ರದಲ್ಲಿ ಸುದೀರ್ಘ 40 ವರ್ಷ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜೆ.ಹೆಚ್. ಬಷೀರ್ ಅಹಮದ್ ಅವರಿಗೆ ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆಯ ದಾವಣಗೆರೆ ಜಿಲ್ಲಾ ಉಪ ನಿರ್ದೇಶಕ ಚಂದ್ರಪ್ಪ, ಸಹಾಯಕ ನಿರ್ದೇಶಕ ಹರ್ಷ, ವಿಸ್ತರಣಾಧಿಕಾರಿಗಳಾದ ಬಾಲಸುಬ್ರಮಣ್ಯ ಜೋಯಿಸ್, ಎಂ.ಕೆ. ಧನಂಜಯ್, ಮುಖಂಡ ಪಿ.ಎಸ್. ಅರವಿಂದ್, ಜೆ.ಎ. ಪರ್ವೆಜ್ ಮತ್ತು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.
ರೇಷ್ಮೆ ಇಲಾಖೆ ನೌಕರ ಬಷೀರ್ ಅಹಮದ್ ಸೇವಾ ನಿವೃತ್ತಿ, ಸನ್ಮಾನ
