ದಾವಣಗೆರೆ, ಆ. 4- ಧರ್ಮ ಪ್ರಸರಣ ಸಮಿತಿ, ವಿಶ್ವ ಹಿಂದೂ ಪರಿಷತ್ ವತಿಯಿಂದ ನಗರದ ಎಸ್‌ಓಜಿ ಕಾಲೋನಿಯಲ್ಲಿ ಹಿಂದೂ ಭಕ್ತರು ಶ್ರೀ ಕರಿಬಸವೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಕಳೆದ ವಾರ ಪಾದಯಾತ್ರೆ ನಡೆಸಿದರು.
ಕಾಲೋನಿಯ 10 ಮನೆಗಳಲ್ಲಿ ಸ್ವಾಮೀಜಿಗಳಿಗೆ ಪಾದಪೂಜೆ ನೆರವೇರಿಸಲಾಯಿತು. ನಂತರ ಕಾಲೋನಿಯ ಹನುಮಂತಪ್ಪನವರ ಮನೆಯಲ್ಲಿ ಸಮಾರೋಪ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಲತೇಶ್ ಗುಪ್ತಾಜಿ ಉಪಸ್ಥಿತರಿದ್ದು ಮಾತನಾಡಿ, ಶ್ರೀ ಕರಿಬಸವೇಶ್ವರ ಸ್ವಾಮಿಗಳು, ಹಿಂದೂ ಧರ್ಮದ ಶ್ರೇಷ್ಠತೆಯ ಬಗ್ಗೆ ಜನರಿಗೆ ಉಪದೇಶ ನೀಡಿದರು. ಮನೆಗಳಲ್ಲಿ ನಮ್ಮ ಮಕ್ಕಳಿಗೆ ಹಿಂದೂ ಪರಂಪರೆಯ, ಸಾಧು-ಸಂತರ ಬಗ್ಗೆ ತಿಳುವಳಿಕೆ ಕೊಡಬೇಕು ಹಾಗೂ ಧರ್ಮದ ಆಚರಣೆ ಮತ್ತು ಆಚಾರ-ವಿಚಾರಗಳನ್ನು ಮಕ್ಕಳಲ್ಲಿ ರೂಢಿಸಬೇಕೆಂದು ಹೇಳಿದರು.
ಜಿ. ರವೀಂದ್ರ, ಮಾಲತೇಶ್ ಗುಪ್ತಾ, ಹನುಮಂತಪ್ಪ, ಕಲ್ಲೇಶಪ್ಪ, ಯೋಗ ಗುರು ಮಲ್ಲಪ್ಪ, ಲೋಕೇಶ್ ಆಚಾರ್, ರಾಜು ರಾಮನಗರ, ಶಿವಕುಮಾರ್ ನೇಕಾರ, ಬಾತಿಗೌಡ್ರು ಶಿವಕುಮಾರ್, ದೀಪಕ್ ಪಟೇಲ್, ರುದ್ರೇಶ್, ಸೀನಪ್ಪ ಇವರುಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಜ್ಜನ್ ಸ್ವಾಗತಿಸಿದರು.