ರಾಣೇಬೆನ್ನೂರು, ಆ. 4 – ಜಯತೀರ್ಥ ಗುರುಗಳ ಆರಾಧನೆ ಪ್ರಯುಕ್ತ ನಗರದ ಮಧ್ವ ಸಂಘದ ವತಿಯಿಂದ ಗುರುಗಳ ಪಾಲಿಕೆ ಗ್ರಾಮ ಪ್ರದಕ್ಷಿಣೆ ಹಾಗೂ ಗುರುಗಳ ಆರಾಧನೆ ಉತ್ತರಾದಿಮಠದಲ್ಲಿ ನಡೆಯಿತು. ಮಧ್ವ ಸಂಘದ ಅಧ್ಯಕ್ಷ ಅನಂತ ಚಂದಿ, ರಂಗಣ್ಣ ದೇಶಪಾಂಡೆ, ಪಿ.ಕೆ.ಹಂಚಿನಮನಿ, ಮಧ್ವಾಚಾರ್ಯ ಚಂದಿ, ಸಂಜೀವ ಶಿರಹಟ್ಟಿ, ಮಾಧವ ಸಾತೇನಹಳ್ಳಿ, ಗುರುರಾಜ ವರಾಹ ಮೂರ್ತಿ, ಧೀರೇಂದ್ರ ಪಂಚಭಾವಿ, ಅನಿಲ್ ಅರಕೇರಿ, ಎನ್.ಎಮ್. ಶಿರಹಟ್ಟಿ, ತುಳಸಿ ಮತ್ತು ವೇದಾವತಿ ಭಜನಾ ಮಂಡಳಿ ಸದಸ್ಯರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
January 16, 2025