ಎಂ.ಆರ್. ನಾಗರಾಜ್ ಅಭಿಮತ
ದಾವಣಗೆರೆ, ಆ.4- ವಿದ್ಯಾರ್ಥಿಗಳಲ್ಲಿ ಸಂವಹನ ಕಲೆ ಬೆಳೆಯಲು ಅಪಾರವಾದ ಜ್ಞಾನ, ವಿಮರ್ಶೆ ಮತ್ತು ಕಲಿಕಾಸಕ್ತಿಯಿಂದ ಸಾಧ್ಯ ಎಂದು ಪ್ರೊ.ಎಂ.ಆರ್. ನಾಗರಾಜ್ ಹೇಳಿದರು.
ಮಾತೃಶ್ರೀ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ತೋಳಹುಣಸೆಯ ವಿವಿಯಲ್ಲಿ ನಡೆದ ಪರಿಣಾಮಕಾರಿ ಸಂವಹನ ಹಾಗೂ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲು ಉತ್ತಮ ಸಂವಹನ ಕೌಶಲ್ಯಗಳು ವಿದ್ಯಾರ್ಥಿಗಳಿಗೆ ಬೇಕಾಗಲಿವೆ ಎಂದು ಹೇಳಿದರು.
ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಎಂ.ಯು. ಲೋಕೇಶ್ ಮಾತನಾಡಿ, ವಿದ್ಯಾರ್ಥಿಗಳು ಗುರು-ಹಿರಿಯರನ್ನು ಗೌರವ ಭಾವದಿಂದ ಕಾಣುವ ಜತೆಗೆ ವಿನಯತೆ ಹಾಗೂ ವಿಧೆಯತೆಯ ಗುಣ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ಬಿ.ಎಸ್. ಪ್ರದೀಪ್ ಮಾತನಾಡಿ, ಇಂದಿನ ಮಕ್ಕಳು ಪರಿಣಾಮಕಾರಿ ಸಂವಹನ ಕಲೆ ಬೆಳೆಸಿಕೊಂಡರೆ ಗುರಿ ಸಾಧಿಸಲು ಸಹಾಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತೃಶ್ರೀ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಎ.ಎಲ್. ಕಿರಣ್, ಸದಸ್ಯರಾದ ಲಕ್ಷ್ಮಿ, ಕುಮಾರಸ್ವಾಮಿ, ಆಂಜನೇಯ, ಶಿವಕುಮಾರ, ಮುರುಳೀಧರ್, ಮಂಜುನಾಥ್ ಮತ್ತು ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಇದ್ದರು.