ದಾವಣಗೆರೆ, ಆ. 4- ಹೆರಿಗೆಯಾದ ಒಂದು ಗಂಟೆಯೊಳಗಾಗಿ ತಾಯಿ ತನ್ನ ಮಗುವಿಗೆ ಎದೆ ಹಾಲು ಉಣಿಸಬೇಕು ಎಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ರೇಣುಕಾರಾಧ್ಯ ಗರ್ಭಿಣಿ ಮಹಿಳೆಯರಿಗೆ ಮತ್ತು ತಾಯಂದಿರಿಗೆ ತಿಳಿಸಿದರು.
ಜಿಲ್ಲಾ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಿನ್ನೆ ಜರುಗಿದ ವಿಶ್ವ ಸ್ತನ್ಯಪಾನ ಸಪ್ತಾಹ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆರಿಗೆ ಆಗಿ ಒಂದು ಗಂಟೆಯೊಳಗೆ ತಾಯಿ ಎದೆ ಹಾಲನ್ನು ಮಗುವಿಗೆ ಕುಡಿಸುವ ಪ್ರಮಾಣ ಶೇ. 70 ರಿಂದ 75 ರಷ್ಟು ಇರುವುದರಿಂದ ಈ ಒಂದು ಪ್ರಮಾಣವನ್ನು ಶೇ. 100 ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಆರೋಗ್ಯ ಸಿಬ್ಬಂದಿಗಳು ಕ್ರಮವಹಿಸು ವುದರ ಕುರಿತು ಸೂಚನೆ ನೀಡಿದರು.
ಮಕ್ಕಳ ತಜ್ಞರಾದ ಡಾ. ಸುಧಾ ಸಿ.ಪಾಟೀಲ್ ಮಾತನಾಡಿ, ಈ ವರ್ಷದ ವಿಶ್ವ ಸ್ತನ್ಯಪಾನ ಸಪ್ತಾಹದ ಘೋಷವಾಕ್ಯ `ಕೆೋರತೆಗಳನ್ನು ಕೆೋನೆಗೆೋಳಿಸಿ ಸರ್ವರಿಗೂ ಸ್ತನ್ಯಪಾನದ ಬೆಂಬಲ ನೀಡಿ’ ಎಂಬುದರ ಕುರಿತು ಎದೆ ಹಾಲಿನ
ಮಹತ್ವ ತಿಳಿಸಿದರು.
ಅಲ್ಲದೇ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಕೆೋರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.
ವೈದ್ಯಕೀಯ ಅಧೀಕ್ಷಕರಾದ ಡಾ. ಮಧು ಎಸ್.ಪಿ , ತಾಯಿ ಎದೆಹಾಲಿನ ಮಹತ್ವ ಮತ್ತು ವಿಶ್ವ ಸ್ತನ್ಯಪಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರಾದ ಡಾ. ಲತಾದೇವಿ ತಾಯಿ ಎದೆ ಹಾಲು ಅಮೃತಕ್ಕೆ ಸಮಾನ ಎನ್ನುವ ಕುರಿತು ತಿಳಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರುದ್ರಸ್ವಾಮಿ, ಸಹಾಯಕ ಆಡಳಿತಾಧಿಕಾರಿ ಹೇಮಣ್ಣ ಟಿ.ಪಿ, ಹಿರಿಯ ತಜ್ಞರಾದ ಡಾ. ಭಾರತಿ ಎಸ್.ಜಿ, ಡಾ. ಬಸವರಾಜ್ ಎ.ಸಿ., ಡಾ. ಅನಿತಾ, ಡಾ. ಸಂಜಯ್ ಎಸ್.ಟಿ, ಡಾ. ಪ್ರವೀಣ ಎಸ್.ಎನ್,ಡಾ. ಮಹೇಶ್ ಎಸ್, ಎಂ, ಡಾ. ಎಸ್.ಎಸ್. ಕೆೋಳಕೂರ್ ಮತ್ತು ಮಕ್ಕಳ ತಜ್ಞರಾದ ಡಾ. ಛಾಯಾ, ಡಾ. ಮಹ್ಮದ್ ಅಜರುದ್ದಿನ್, ತ್ರಿವೇಣಿ ಶಾನ್‌ಭಾಗ್ ಹಾಗೂ ಇತರರು ಉಪಸ್ಥಿತರಿದ್ದರು.