ಎಲ್ಲೆಡೆ ಕೆರೆ-ಕೊಳ್ಳ ತುಂಬಿ ಹರಿದರೂ.. ರಾಣೇಬೆನ್ನೂರು ದೊಡ್ಡಕೆರೆಗಿಲ್ಲದ ಭಾಗ್ಯ.!

ಎಲ್ಲೆಡೆ ಕೆರೆ-ಕೊಳ್ಳ ತುಂಬಿ ಹರಿದರೂ.. ರಾಣೇಬೆನ್ನೂರು ದೊಡ್ಡಕೆರೆಗಿಲ್ಲದ ಭಾಗ್ಯ.!

ರಾಣೇಬೆನ್ನೂರು,ಆ.2- ನಾಡಿನಾದ್ಯಂತ  ಬೀಳುತ್ತಿರುವ ಮಳೆಯಿಂದ ಹೊಳೆ-ಹಳ್ಳಗಳು ಬೋರ್ಗರೆಯುತ್ತ ಹರಿದವು, ಕೆರೆ-ಕೊಳ್ಳ ತುಂಬಿ ತುಳುಕಾಡಿದವಾದರೂ ರಾಣೇಬೆನ್ನೂರು ದೊಡ್ಡಕೆರೆಗೆ ಆ ಭಾಗ್ಯವಿಲ್ಲ. ಅಲ್ಲಲ್ಲಿ ಬಂದ ಮಳೆಯ ನೀರಿನಿಂದ ತಗ್ಗು ಪ್ರದೇಶದಲ್ಲಿ ಸಂಗ್ರಹವಾಗಿದ್ದು, ಕೆರೆ ತುಂಬಾ ಬೆಳೆದಿರುವ ಗಿಡಗಂಟೆಗಳಿಂದ ಇರುವ ನೀರು ಒಂದೆರಡು ತಿಂಗಳಲ್ಲಿ  ಇಂಗಿ ಕೆರೆ ಖಾಲಿ ಆಗಬಹುದು ಎನ್ನುವ ಆತಂಕ ಜನರಲ್ಲುಂಟಾಗಿದೆ.

ಸುಮಾರು 250ಕ್ಕೂ ಅಧಿಕ ಎಕರೆಯಷ್ಟು ವಿಸ್ತೀರ್ಣದಲ್ಲಿರುವ ಈ ಕೆರೆ ತುಂಬಿದರೆ ಅಂತರ್ಜಲ ವೃದ್ದಿಸಿ, ಸುತ್ತಲಿನ 400 ಎಕರೆಯಷ್ಟು  ನೀರಾವರಿ,   ಅಡವಿ ಆಂಜನೇಯ ಬಡಾವಣೆ, ಗಂಗಾಜಲ ತಾಂಡಾ ಜೊತೆಗೆ ಕೊಟ್ಟೂರೇಶ್ವರ ನಗರ, ಚೌಡೇಶ್ವರಿ ಬಡಾವಣೆ ಸೇರಿದಂತೆ ಭಾಗಶಃ ರಾಣೇಬೆನ್ನೂರು ನಗರದ ಕೊಳವೆಬಾವಿಗಳಲ್ಲಿ ನೀರೊದಗಲಿದೆ.

ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ ಅವರು ಈ ಕೆರೆಯನ್ನ ನೂರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ನಗರ ವಾಸಿಗಳಿಗೆ ಮನರಂಜನಾ ತಾಣ ಮಾಡಲು ಕೈಗೊಳ್ಳಲಾದ ಯೋಜನೆ ಅಪೂರ್ಣಗೊಂಡಿದೆ. ಅಡವಿ ಆಂಜನೇಯ ಬಡಾವಣೆ ಸಮೀಪ ಕೆರೆ ಕೋಡಿ ಬೀಳುವಲ್ಲಿ  ಇಪ್ಪತ್ತು ಎಕರೆಯಷ್ಷು  ಕೆರೆಯಂಗಳದ ಬಯಲನ್ನು ದನಕರುಗಳಿಗೆ ಕುಡಿಯುವ ನೀರು ಸಂಗ್ರಹಿಸಲು ಗುಂಡಿ  ಮಾಡಲಾಗಿದ್ದರೂ ಒಂದು ಹನಿ ನೀರು ಸಂಗ್ರಹವಾಗಲ್ಲದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.  ತುಂಗಭದ್ರಾ ನದಿ  ನೀರು ತಂದು ಕೆರೆ ತುಂಬಿಸಲು ಶಾಸಕ ಪ್ರಕಾಶ ಕೋಳಿವಾಡ ತಕ್ಷಣ ಕ್ರಮ ಕೈಗೊಳ್ಳಬೇಕು  ಎಂಬುದು ಜನರ ಒತ್ತಾಯವಾಗಿದೆ. 

error: Content is protected !!