ದಾವಣಗೆರೆ, ಆ. 2 – ಬೆಂಗಳೂರು ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಎಂ.ಎಸ್. ಪ್ರಸನ್ನ ಕುಮಾರ್ ಹಾಗೂ ಜಮಖಂಡಿ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಸಹ ನಿರ್ದೇಶಕ ಜಿ. ಆರ್. ತಿಪ್ಪೇಶಪ್ಪ ಅವರುಗಳಿಗೆ ನಾಡಿದ್ದು ದಿನಾಂಕ 4ರ ಭಾನುವಾರ ಬೆಳಗ್ಗೆ 10 ಗಂಟೆಗೆ ನಗರದ ಅಥಣಿ ಎಸ್. ಬಿ. ಸಿ. ಕಾಲೇಜಿನಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದೆ. ಸನ್ಮಾನಿತರು ದಾವಣಗೆರೆ ಜಿಲ್ಲೆಯವರಾಗಿದ್ದು, ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಪರ ಕೆಲಸಗಳನ್ನು ನಿರ್ವಹಿಸಿ, ಶಿಕ್ಷಕರ ಅಭಿಮಾನಕ್ಕೆ ಪಾತ್ರರಾದ ಅವರನ್ನು ಅಭಿನಂದಿಸಲಾಗುವುದು, ಅಭಿಮಾನಿಗಳು ಭಾಗವಹಿಸಬೇಕೆಂದು ಅಭಿಮಾನಿ ಬಳಗದ ಕೆ.ಜಿ. ಶಿವಶಂಕರ್ ಮನವಿ ಮಾಡಿದ್ದಾರೆ.
January 16, 2025