ದಾವಣಗೆರೆ, ಆ.2- ನಗರದ ಯೋಗ ಕೇಂದ್ರವಾದ ಎಸ್‌ಎಎಸ್‌ಎಸ್ ಯೋಗ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಯೋಗಾಚಾರ್ಯ ಎನ್. ಪರಶುರಾಮ್ ಅವರಿಗೆ `ಯೋಗ ಶಿರೋಮಣಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇತ್ತೀಚಿಗೆ ಬೆಂಗಳೂರಿನ ಕೋರಮಂಗಲದ ಒಳ ಕ್ರೀಡಾಂಗಣದಲ್ಲಿ ನಡೆದ ಎಸ್‌ಜಿಎಸ್ ಇಂಟರ್ ನ್ಯಾಷನಲ್ ಯೋಗ ಫೌಂಡೇಷನ್ ಕಾಲೇಜ್ ರಿಸರ್ಚ್ ಅಂಡ್ ಸೆಂಟರ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಸಹಕಾರದಲ್ಲಿ ನಡೆದ ಅಂತರರಾಜ್ಯ ಯೋಗಾಸನ ಚಾಂಪಿಯನ್ ಶಿಪ್ ಕಾರ್ಯಕ್ರಮದಲ್ಲಿ ಪರಶುರಾಮ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
January 10, 2025