ಹರಪನಹಳ್ಳಿ, ಆ. 2 – ಸಿದ್ದೇಶ್ವರ ವಸತಿ ಪ್ರೌಢ ಶಾಲೆ ಹಿಂದಿ ಭಾಷಾ ಶಿಕ್ಷಕ ಸಿದ್ದೇಶ್ ವರ್ಗಾವಣೆ ಆದೇಶವನ್ನು ರದ್ದುಗೊಳಿಸಲು ಆಗ್ರಹಿಸಿ, ಶಾಲಾ ಮಕ್ಕಳು ಹಾಗೂ ಪೋಷಕರು ದಿಢೀರ್ ಪ್ರತಿಭಟನೆ ನಡೆಸಿದರು.
ಹಿಂದಿ ಭಾಷಾ ಶಿಕ್ಷಕ ಸಿದ್ದೇಶ್ ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಾದರಿಯ ಶಿಕ್ಷಕ ಎನಿಸಿಕೊಂಡಿದ್ದಾರೆ. ಅವರನ್ನು, ಶಾಲಾ ಆಡಳಿತ ಮಂಡಳಿ ಏಕಾಏಕಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ. ವರ್ಗಾವಣೆಯಿಂದ ಮಕ್ಕಳ ಶೈಕ್ಷಣಿಕ ಮಟ್ಟ ಕುಸಿಯಬಹುದು. ಆದ್ದರಿಂದ ಕೂಡಲೇ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿ ಶಿಕ್ಷಕ ಸಿದ್ದೇಶ್ ಅವರನ್ನು ಮುಂದುವರೆಸುವಂತೆ ವಿದ್ಯಾರ್ಥಿಗಳು, ಪೋಷಕರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡ ಚಿನ್ನಪ್ಪ, ಜಿ. ನಾಗರಾಜ್, ಸಿದ್ಧವೀರಪ್ಪ, ಅಶೋಕ್, ಹಾಲೇಶ್, ನಾಗರಾಜ್, ಭೀಮಪ್ಪ, ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.