ಮಾದಿಗ ಸಮಾಜದ ನಡೆಸಿದ ಹೋರಾಟಕ್ಕೆ ಸಿಕ್ಕ ಪ್ರತಿಫಲ : ಆಲೂರು ನಿಂಗರಾಜ್
ದಾವಣಗೆರೆ, ಆ. 2 – ಒಳ ಮೀಸಲಾತಿ ಜಾರಿ ಮಾಡುವಂತೆ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಮಾದಿಗ ಸಮಾಜದಿಂದ ಶುಕ್ರವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಿ, ಒಳಮೀಸಲಾತಿಗಾಗಿ ಹೋರಾಟ ನಡೆಸಿದವರಿಗೆ ಸಮಾಜದವರು ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಮಾದಿಗ ಸಮಾಜದ ಮುಖಂಡ ಆಲೂರು ನಿಂಗರಾಜ್, ಕರ್ನಾಟಕದಲ್ಲಿ ಮಾದಿಗ ಸಮಾಜಕ್ಕೆ ಉದ್ಯೋಗ, ಸಾಮಾಜಿಕ, ಶೈಕ್ಷಣಿಕ ಹಾಗು ಇನ್ನಿತರೆ ಮೀಸ ಲಾತಿ ಸವಲತ್ತನ್ನು ಜಾತಿ ಜನ ಸಂಖ್ಯೆಗೆ ಅನುಗು ಣವಾಗಿ (ಒಳಮೀಸಲಾತಿ) ಜಾರಿ ಮಾಡುವಂತೆ ಈ ಹಿಂದೆ ಕರ್ನಾಟಕದ ಅಂಬೇಡ್ಕರ್ ಎಂದೇ ಪ್ರಾಖ್ಯಾತರಾಗಿದ್ದ ಪ್ರೊ. ಬಿ. ಕೃಷ್ಣಪ್ಪನವರು 1996ರಲ್ಲಿ ಪ್ರತ್ಯೇಕ ಮೀಸಲಾತಿಗಾಗಿ ಹೋರಾ ಟದ ಹಣತೆ ಹಚ್ಚಿದರು ಎಂದು ನೆನಪಿಸಿಕೊಂಡರು.
ನಂತರದ ದಿನಗಳಲ್ಲಿ ಅನೇಕ ಹೋರಾಟಗಳನ್ನು ನಡೆಸಿದರೂ ಕಾಂಗ್ರೆಸ್ ಸರ್ಕಾರ ಏನೂ ಮಾಡ ಲಿಲ್ಲ ಎಂದು ಆಲೂರು ನಿಂಗರಾಜ್ ಆಕ್ರೋಶ ವ್ಯಕ್ತಪಡಿಸಿದರು. ಸಂಘ ಪರಿವಾರದ ಮಾರ್ಗದರ್ಶನದಂತೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಅವರು ಅಧಿಕಾರ ಅವಧಿಯಲ್ಲಿ ಕೇವಲ ಶೇ. 15 ಇದ್ದ ಮೀಸಲಾತಿಯನ್ನು ಶೇ. 17ಕ್ಕೆ ಹೆಚ್ಚಿಸಿದ್ದಲ್ಲದೇ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಜಾತಿಯಲ್ಲಿ ಬರುವ 101 ಜಾತಿಗಳಿಗೂ ಸಮನಾಗಿ ಅಂದರೆ ಮಾದಿಗ ಜಾತಿಗೆ ಶೇ. 6 ವಲಯ ಜಾತಿಗೆ ಶೇ. 5.5, ಭೋವಿ ಲಂಬಾಣಿ ಜಾತಿಗಳಿಗೆ 4.5 ಮತ್ತು ಇತರೆ ಹಕ್ಕಿಪಿಕ್ಕಿ ಜಾತಿಗಳಿಗೆ ಶೇ. 1 ಮೀಸಲಾತಿಯ ಆಯೋಗ ರಚನೆ ಮಾಡಿ ಅವಕಾಶ ಮಾಡಿಕೊಟ್ಟರು ಎಂದು ತಿಳಿಸಿದರು.
ಈ ವಿಚಾರದಲ್ಲಿ ನಮ್ಮ ಸಮುದಾಯದ ಆಶಯಗಳನ್ನು ಈಡೇರಿಸುವಂತಹ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರು ಹೈದ್ರಾ ಬಾದಿನಲ್ಲಿ ನಡೆದ ಮಾದಿಗ ಸಮಾವೇಶದಲ್ಲಿ ಪಾಲ್ಗೊಂಡು ಭರವಸೆ ಕೊಟ್ಟಿದ್ದರು. ಆದರೆ ಕರ್ನಾಟಕದಲ್ಲಿದ್ದಂತಹ ಕಾಂಗ್ರೆಸ್ ಮೀಸಲಾತಿ ಜಾರಿ ಮಾಡುವಲ್ಲಿ ವಿಳಂಬ ಮಾಡಿ ಗೊಂದಲ ಉಂಟು ಮಾಡಿದ್ದರಿಂದ ನಮ್ಮ ಸಮಾಜದ ಮುಖಂಡರುಗಳು ಸುಪ್ರೀಂ ಕೋರ್ಟಿಗೆ ಹೋಗಿದ್ದರು. ಸುಪ್ರಿಂ ಕೋರ್ಟ್ನ 7 ನ್ಯಾಯಾಧೀಶರ ಪೀಠವು ಆಗಸ್ಟ್ 1ನೇ ರಂದು ಒಳ ಮೀಸಲಾತಿಯನ್ನು ಜಾತಿ ಜನಸಂಖ್ಯೆ ಗನುಗುಣಾವಾಗಿ ಹಂಚಿಕೆ ಮಾಡಬಹುದೆಂದು ಐತಿಹಾಸಿಕ ತೀರ್ಪನ್ನು ನೀಡಿದ್ದು ಇದು ನಿಜಕ್ಕೂ ಮಾದಿಗ ಸಮಾಜದ ನಡೆಸಿದ ಹೋರಾಟಕ್ಕೆ ಸಿಕ್ಕ ಫಲವಾಗಿದೆ ಎಂದರು.
ದಲಿತ ಮುಖಂಡರಾದ ಹೆಚ್. ಮಲ್ಲೇಶ್, ಎಂ. ಹಾಲೇಶ್, ಶಾಮ ನೂರು ರಾಜು, ಜಯ ಪ್ರಕಾಶ್, ಹಾಲೇಶ್ ಜಿಗಳಿ, ಹನುಮಂತಪ್ಪ ಗಾಂಧಿನಗರ, ಅಂಜಿನಪ್ಪ, ರಾಜಪ್ಪ, ದುರ್ಗೆಶ್ ನಿಟ್ಟುವಳ್ಳಿ, ಆನಂದ ಜಾಲಿಹಾಳ್, ನಿಂಗರಾಜ್ ರೆಡ್ಡಿ, ಸಾವಜ್ಜರ್ ಮಂಜು, ಷಣ್ಮುಖ, ಸೋಮ್ಲಾಪುರ ಹನುಮಂತಪ್ಪ, ರಾಮಚಂದ್ರಪ್ಪ, ರಾಘವೇಂದ್ರ, ರವಿ ಕೆಟಿಜೆ ನಗರ, ಮಾನು, ಚೇತನ್, ಜಯಣ್ಣ ಎಸ್.ಓ.ಜಿ. ಕಾಲೋನಿ, ಚಿಕ್ಕನಹಳ್ಳಿ ಹನುಮಂತಪ್ಪ ಹಾಗೂ ಇತರರು ಪಾಲ್ಗೊಂಡಿದ್ದರು.