ನಗರದಲ್ಲಿ ನೂತನ `ಮುಗ್ದ’ ರೇಷ್ಮೆ ಸೀರೆ ಅಂಗಡಿ ಉದ್ಘಾಟನೆ

ನಗರದಲ್ಲಿ ನೂತನ `ಮುಗ್ದ’ ರೇಷ್ಮೆ ಸೀರೆ ಅಂಗಡಿ ಉದ್ಘಾಟನೆ

ದಾವಣಗೆರೆ, ಆ.1- ನಗರದ ಡೆಂಟಲ್ ಕಾಲೇಜು ರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ `ಮುಗ್ದ’ ರೇಷ್ಮೆ ಸೀರೆ ಅಂಗಡಿಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ಅವರು ನಿನ್ನೆ ಉದ್ಘಾಟಿಸಿದರು.

ಈವರೆಗೂ ಮುಗ್ಧ ಅಂಗಡಿ ರಾಜ್ಯದ 4 ಭಾಗಗಳಲ್ಲಿ ತನ್ನ ಶಾಖೆಯನ್ನು ಹೊಂದಿತ್ತು. 5ನೇ ಶಾಖೆಯಾಗಿ ತನ್ನ ವ್ಯಾಪ್ತಿಯನ್ನು ನಗರದಲ್ಲಿ ವಿಸ್ತರಿಸಿಕೊಂಡಿದೆ.

ಅಂಗಡಿಯು ಭಾರತೀಯ ದೇವಾಲಯದ ವಾಸ್ತು ಶಿಲ್ಪದ ಮಾದರಿ ಯಲ್ಲಿದ್ದು, ಅಂಗಡಿಗೆ ಪ್ರವೇಶಿಸಿದ ಗ್ರಾಹಕನಿಗೆ ದೇವಸ್ಥಾನದ ಅನುಭವ ನೀಡುತ್ತದೆ ಮತ್ತು ಭಗವಾನ್ ವೆಂಕಟೇಶ್ವರ ಸ್ವಾಮಿಯ ವಿಗ್ರಹವು ಗ್ರಾಹಕರನ್ನು ದೇವಾಲಯದ ಅಲೆಯಲ್ಲಿ ತೇಲಿಸಲಿದೆ.

ಅತ್ಯುತ್ತಮ ಕುಶಲ ಕರ್ಮಿಗಳಿಂದ ನೇಯ್ದ ಕಾಂಚಿವರಂ ಸೀರೆಯಿಂದ ಬನಾರಸ್‌, ಇಕ್ಕತ್‌ನಿಂದ ಗದ್ವಾಲ್‌, ಪೈಥಾನಿಯಿಂದ ಉಪ್ಪಾಡವರೆಗಿನ ಸೀರೆಗಳು ಸಿಗಲಿವೆ ಎಂದು ಕಂಪನಿಯ ನಿರ್ದೇಶಕ ರಾಜೇಶ್ ತಿಳಿಸಿದ್ದಾರೆ.

error: Content is protected !!