ಹೊನ್ನಾಳಿ, ಆ. 1 – ಇಲ್ಲಿನ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 25ನೇ ವರ್ಷದ ಬೆಳ್ಳಿ ಹಬ್ಬದ ಆಚರಣಾ ಮಹೋತ್ಸವ ಕಾರ್ಯಕ್ರಮವನ್ನು ನಾಳೆ ದಿನಾಂಕ 2ರ ಶುಕ್ರವಾರ ಬೆಳಿಗ್ಗೆ 11ಕ್ಕೆ ಗೊಲ್ಲರ ಹಳ್ಳಿಯ ಶ್ರೀ ತರಳಬಾಳು ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಎಂ. ಸತೀಶ್ ತಿಳಿಸಿದರು.
ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಪತ್ರಿಕಾಗೋಷ್ಠಿಯನ್ನು ದ್ದೇಶಿಸಿ ಅವರು ಮಾತನಾಡಿದರು.
ಜುಲೈ 2000ರಲ್ಲಿ ಸೊಸೈಟಿಯ ಸಂಸ್ಥಾಪಕ ಎ.ಜಿ. ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಸಂಸ್ಥೆಯು ಇಂದು 206 ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದೆ. ಸೊಸೈಟಿಯು ಹೊನ್ನಾಳಿ ಪಟ್ಟಣದಲ್ಲಿ ಸುಸಜ್ಜಿತ ಪ್ರಧಾನ ಕಛೇರಿಯ ಕಟ್ಟಡವನ್ನು ಹೊಂದಿದ್ದಲ್ಲದೇ, ಸೊಸೈಟಿಯಲ್ಲಿ 6534 ಸದಸ್ಯರಿದ್ದು, ಸುರಹೊನ್ನೆ, ಸಾಸ್ವೆಹಳ್ಳಿ, ಕುಂದೂರು ಮತ್ತು ಚೀಲೂರು ಹೋಬಳಿ ಕೇಂದ್ರಗಳಲ್ಲಿ ಶಾಖೆಗಳನ್ನು ತೆರೆದು, ಸದಸ್ಯರಿಗೆ ಸೊಸೈಟಿಯು ನೀಡುತ್ತಿರುವ ಉತ್ತಮ ಸೇವೆ ಮತ್ತು ಸೌಲಭ್ಯಗಳಿಂದ ಸದಸ್ಯರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಮಾಹಿತಿ ನೀಡಿದರು.
ಶುಕ್ರವಾರ ನಡೆಯಲಿರುವ ಬೆಳ್ಳಿ ಹಬ್ಬದ ಆಚರಣಾ ಮಹೋತ್ಸವದ ಸಾನ್ನಿಧ್ಯವನ್ನು ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಡಾ.ಡಿ.ಬಿ. ಗಂಗಪ್ಪ, ಸಾಧು ವೀರಶೈವ ಸಮಾಜದ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಸಾಧು ವೀರಶೈವ ಸಮಾಜದ ಅಧ್ಯಕ್ಷ ಎಚ್.ಎ. ಗದ್ದಿಗೇಶ್, ಜಿ. ಶಿವಪ್ಪ, ಶಿಮುಲ್ ನಿರ್ದೇಶಕ ಬಿ.ಜಿ. ಬಸವರಾಜಪ್ಪ, ಡಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಡಿ.ಎಸ್.ಸುರೇಂದ್ರಗೌಡ, ಡಿ.ಜಿ. ವಿಶ್ವನಾಥ್ ಸಹಕಾರ ಅಭಿವೃದ್ಧಿ ಅಧಿಕಾರಿ ನವೀನ್ ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸೊಸೈಟಿಯ ಉಪಾಧ್ಯಕ್ಷೆ ಜಿ. ಯಶೋಧಮ್ಮ, ಕಾರ್ಯದರ್ಶಿ ಎಚ್.ಎನ್. ರುದ್ರೇಶ್, ನಿರ್ದೇಶಕ ಪಿ.ಬಿ. ಶೈಲೇಶ್, ಪಿ.ಚಂದ್ರಪ್ಪ, ಬಿ. ಕೆಂಚಪ್ಪ, ಡಿ.ಜಿ.ಎನ್. ಚನ್ನವೀರಪ್ಪ, ಕೆ.ಎನ್. ಬಸವರಾಜ್, ಆರ್.ಸಿ. ಶಂಕರಗೌಡ, ಕೆ.ಬಿ. ಕರಿಬಸಪ್ಪ, ಕೆ.ಎಸ್. ಶಿವಕುಮಾರ್, ಎನ್.ಇ. ಚೇತನ್‍ಕುಮಾರ್, ಕೆ.ಜಿ. ಮಂಜುಳಾ, ಎನ್. ಕೃಷ್ಣಾನಾಯ್ಕ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.