ದಾವಣಗೆರೆ, ಆ. 1- ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶಾಮನೂರಿನ ಎಸ್.ಜೆ. ಪ್ರಶಾಂತ್ ಅವರು ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಡಾ. ಕೆ.ಜಿ. ಸತೀಶ್ ಅವರ ಮಾರ್ಗದರ್ಶನದಲ್ಲಿ `ಇನ್ವೆಸ್ಟಿಗೇಷನ್ ಆನ್ ಸಿ ವಾಟರ್ ಡ್ಯುರೆಬಿಲಿಟಿ ಆಫ್ ಫಿಲ್ಡ್ ಪಾಲಿಮರ್ ಹೈಬ್ರಿಡ್ ಕಾಂಪೋಸಿಟ್’ ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಪಿಹೆಚ್‌ಡಿ ಪದವಿ ನೀಡಿದೆ.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ
24ನೇ ವಾರ್ಷಿಕ ಘಟಿಕೋತ್ಸವದಲ್ಲಿ ಉಪ ಕುಲಪತಿ ಡಾ. ಎಸ್. ವಿದ್ಯಾಶಂಕರ್ ಅವರು ಪದವಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕುಲಸಚಿವರಾದ ಡಾ. ಬಿ.ಇ. ರಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಾಂತ್ ಅವರು, ಶಾಮನೂರಿನ ಶ್ರೀಮತಿ ಕಲಾವತಿ ಮತ್ತು ಜಯಣ್ಣ ಅವರ ಪುತ್ರ ಹಾಗೂ ಗಾಜನೂರು ನವೋದಯ ವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀಮತಿ ರೇಖಾ ಆರ್. ಸುಲಾಖೆ ಅವರ ಪತಿ.