ದಾವಣಗೆರೆ, ಜು.29- ಇಲ್ಲಿಗೆ ಸಮೀಪದ ಹಳೇಬಾತಿ ಗ್ರಾಮಕ್ಕೆ ಬೆಳಗ್ಗೆ 8 ರಿಂದ 10ರವರೆಗೆ ಕೆಎಸ್ಆರ್ಟಿಸಿ ಬಸ್ ಸೇವೆ ಸಮರ್ಪಕವಾಗಿಲ್ಲದ ಕಾರಣ, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಸೇರಿದಂತೆ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಸೇವೆ ಆರಂಭಿಸುವುದಕ್ಕಿಂತ ಮುಂಚೆ ಬೆಳಿಗ್ಗೆ ಬಸ್ ಸಮಸ್ಯೆ ಇರಲಿಲ್ಲ. ಈಗ ಉಚಿತ ಸೇವೆ ಆರಂಭಿಸದ ಮೇಲೆ ತೀವ್ರ ಸಮಸ್ಯೆಯಾಗಿದೆ. ಮೊದಲಿನಂತೆ ಬೆಳಿಗ್ಗೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಾದ ಸಿದ್ದೇಶ್, ಅಶೋಕ್, ಹನುಮಂತಪ್ಪ, ಯುವರಾಜ್, ಶಾಂತರಾಜ್, ಪೂಜಾರ್ ದೇವೇಂದ್ರಪ್ಪ, ಸಚಿನ್, ದರ್ಶನ್ ಮತ್ತಿತರರು ಒತ್ತಾಯಿಸಿದ್ದಾರೆ.
January 16, 2025