ದಾವಣಗೆರೆ, ಜು.28- ಅಧಿಕ ಮಳೆಯಿಂದಾಗಿ ತೊಂದರೇಗಿಡಾದ ಪಾಲಿಕೆ ವ್ಯಾಪ್ತಿಯ ಸಂತ್ರಸ್ತರಿಗೆ ತುರ್ತಾಗಿ ಸ್ಪಂದಿಸಿದ ಅಧಿಕಾರಿಗಳ ಕಾರ್ಯಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯ 21ನೇ ವಾರ್ಡಿನ ಬಿ. ಬಸಾಪುರ ನಿವಾಸಿ ಗಂಗಮ್ಮ ಅವರ ಮನೆ ನೆಲ ಕಚ್ಚಿದ್ದು, ಗಂಗಮ್ಮ ಅವರಿಗೆ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಕಲ್ಪಿಸಿ, ಮನೆ ಸಾಮಗ್ರಿ ಇಟ್ಟುಕೊಳ್ಳಲು ಅಕ್ಕಪಕ್ಕದ ನಿವಾಸಿಗಳ ಮನವೊಲಿಸಿ, ತುರ್ತಾಗಿ ಸ್ಪಂದಿಸಿದ್ದಾರೆ.
ಜುಲೈ 26 ರಂದು ಸುರಿದ ಮಳೆಯಿಂದಾಗಿ ಈ ಘಟನೆ
ನಡೆದಿದ್ದು, ತಕ್ಷಣವೇ ಸ್ಥಳಕ್ಕೆ ನ್ಯಾಯಾಧೀಶರು, ತಹಶೀಲ್ದಾರ್, ಪಾಲಿಕೆ ಅಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಎಸ್ಡಿಆರ್ಎಫ್ ನಡಿ ಸಂತ್ರಸ್ತೆಗೆ ಮನೆ ಪರಿಹಾರ ಹಾಗೂ ಪಾಲಿಕೆಯಿಂದ ಮನೆ ನಿರ್ಮಾಣ ಮಾಡಲು ದಾಖಲೆ ಪರಿಶೀಲಿಸಿ, ಮಾಹಿತಿ ಪಡೆದಿದ್ದಾರೆ.