ಮಲೇಬೆನ್ನೂರು, ಜು.28- ಮೇಲ್ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವ ಕಾರಣ ಮಲೇಬೆನ್ನೂರು ಮತ್ತು ಕುಂಬಳೂರಿನಲ್ಲಿರುವ ಭದ್ರಾ ನಾಲೆಯಲ್ಲಿ ಮಳೆ ನೀರು ಶನಿವಾರ ಸಂಜೆಯಿಂದ ಹರಿದು ಬರುತ್ತಿದ್ದು, ಇದನ್ನು ನೋಡಿದ ಅನೇಕರು ಭದ್ರಾ ಜಲಾಶಯದಿಂದಲೇ ನೀರು ಬಿಡುಗಡೆ ಮಾಡಲಾಗಿದೆಯಾ ? ಎಂಬ ಪ್ರಶ್ನೆ ಮಾಡಿ ಕೊನೆಗೆ ಉತ್ತರ ಸಿಕ್ಕಾಗ ಮಳೆ ನೀರು ಎಂದು ಒಪ್ಪಿಕೊಂಡರು. ಬಹಳ ದಿನಗಳ ನಂತರ ನಾಲೆಯಲ್ಲಿ ಹರಿಯುತ್ತಿರುವ ನೀರು ಎಲ್ಲರ ಗಮನ ಸೆಳೆಯುತ್ತಿದೆ.
December 22, 2024