ಮಳೆಯಿಂದ ಅಲ್ಪ ಹಾನಿ ; ಶೀಘ್ರದಲ್ಲಿ ಪರಿಹಾರ

ಮಳೆಯಿಂದ ಅಲ್ಪ ಹಾನಿ ; ಶೀಘ್ರದಲ್ಲಿ ಪರಿಹಾರ

ರಾಣೇಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ

ರಾಣೇಬೆನ್ನೂರು, ಜು. 28 –  ಕಳೆದ ಒಂದು ವಾರದಿಂದ ಮಳೆ ಸುರಿದರೂ ಸಹ ನಮ್ಮ ತಾಲ್ಲೂಕಿನಲ್ಲಿ ದೊಡ್ಡ ಮಟ್ಟದ ಬೆಳೆ ಹಾನಿಯಾಗಲೀ ಹಾಗೂ ಹೆಚ್ಚು ಮನೆಗಳು ಬಿದ್ದ ದುರ್ಘಟನೆಗಳು ನಡೆದಿಲ್ಲ. ತುಂಗಭದ್ರಾ ಹಾಗೂ ಕುಮದ್ವತಿ ನದಿ ತೀರದ ನಾಲ್ಕಾರು ಗ್ರಾಮಗಳ  ಹತ್ತಾರು ಎಕರೆಗಳಲ್ಲಿನ ಬೆಳೆ ಹಾಳಾಗಿದೆ. 

ಎರೆ ಹೊಲದಲ್ಲಿನ ಗೋವಿನ ಜೋಳದ ಬೆಳೆ ಸ್ವಲ್ಪ ಬಣ್ಣ ಬದಲಾಗಿದೆ. ನಗರದ ಒಂದೆರಡು, ಗ್ರಾಮೀಣ ಭಾಗದ ನಾಲ್ಕಾರು ಮನೆಗಳು ಬಿದ್ದಿವೆ  ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಅವರು ಇಂದು  ತಾಲ್ಲೂಕಿನ ಮುಷ್ಟೂರು ಗ್ರಾಮದಲ್ಲಿ ಕೋಟಿಹಾಳ, ನಿಟವಳ್ಳಿ,  ಲಿಂಗದಹಳ್ಳಿ, ನಂದಿಹಳ್ಳಿ ಗ್ರಾಮಗಳ ಸಂಪರ್ಕ ಕಡಿದುಕೊಂಡು ಮೈದುಂಬಿ ಹರಿಯುತ್ತಿದ್ದ ಕುಮದ್ವತಿ ನದಿಗೆ ಬಾಗಿನ ಅರ್ಪಿಸಿ ಪತ್ರ ಕರ್ತರ ಜೊತೆ ಮಾತನಾಡಿದರು.

ಬೆಳೆ ಹಾಗೂ ಮನೆ ಕಳೆದುಕೊಂಡ ಎಲ್ಲರಿಗೂ ಸರ್ಕಾರ ಶೀಘ್ರವಾಗಿ ಪರಿಹಾರದ ಹಣ ಕೊಡಲಿದೆ ಎಂದು ಹೇಳಿದ ಶಾಸಕ ಪ್ರಕಾಶ ಅವರು,   ಒಂದು ಭಾಗ ಭೂಮಿ, ಮೂರು ಭಾಗ ನೀರು ಇದ್ದರೂ  ಸಹ  ಎಲ್ಲ ನೀರು ಜೀವ ಸಂಕುಲಕ್ಕೆ ಬಳಕೆ ಮಾಡಲು ಬರಲಾರದು. 

ಶೇ. 8 ರಷ್ಟು ನೀರು ಮಾತ್ರ ಬಳಕೆಗೆ ಸಿಗಲಿದೆ. ಕಾರಣ ಈ ಜೀವ ಜಲವನ್ನು ದುರ್ಬಳಕೆ ಮಾಡದೇ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವೆಂದರು.

ಶಾಸಕರ ಜೊತೆ
ರವೀಂದ್ರಗೌಡ ಪಾಟೀಲ, ಮಂಜನಗೌಡ ಪಾಟೀಲ,
ಶೇಖಪ್ಪ ಹೊಸಗೌಡ್ರ, ಬಸನಗೌಡ ಮರದ, ಬಸವರಾಜ ಹುಚ್ಚಗೊಂಡರ, ಸೀತಾ ರಾಮರೆಡ್ಡಿ, ಸಣ್ಣ-ತಮ್ಮಪ್ಪ ಬಾರ್ಕಿ, ಪುಟ್ಟಪ್ಪ ಮರಿಯಮ್ಮನವರ, ನೀಲಕಂಠಪ್ಪ ಕುಸಗೂರ, ಕೃಷ್ಣಪ್ಪ ಕಂಬಳಿ, ಗಿರೀಶ ಮಾಗನೂರ, ಮುಷ್ಟೊರು, ಇಟಗಿ, ಕೃಷ್ಣಾಪುರ, ಮಣಕೂರ ಗ್ರಾಮಸ್ಥರು, ಮತ್ತಿತರರಿದ್ದರು.

error: Content is protected !!