ದಾವಣಗೆರೆ ಲಯನ್ಸ್ ಕ್ಲಬ್ ವತಿಯಿಂದ ವೈದ್ಯರ ದಿನಾಚರಣೆ ಕಾರ್ಯಕ್ರಮವು ಲಯನ್ಸ್ ಭವನದಲ್ಲಿ ಇಂದು ಸಂಜೆ 7.45ಕ್ಕೆ ನಡೆಯಲಿದ್ದು, ಲಯನ್ಸ್ ಅಧ್ಯಕ್ಷ ಎಸ್.ಜಿ. ಉಳವಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಾರ್ಯದರ್ಶಿ ಸಿ.ಅಜಯ್ ನಾರಾಯಣ ತಿಳಿಸಿದ್ದಾರೆ. ಹಿರಿಯ ವೈದ್ಯರುಗಳಾದ ಡಾ. ಎಸ್. ಎಂ. ಎಲಿ, ಡಾ. ಜಿ. ಶಿವಲಿಂಗಪ್ಪ, ಡಾ. ಬಿ.ಎಸ್. ನಾಗಪ್ರಕಾಶ್, ಡಾ. ಟಿ.ಬಸವರಾಜ್, ಡಾ. ಜಿ. ಚಂದ್ರಶೇಖರ್, ಡಾ. ಟಿ.ಎಂ. ರವೀಂದ್ರಕುಮಾರ್, ಡಾ. ಆರತಿ ಸುಂದರೇಶ್, ಡಾ.ಸುರೇಂದ್ರ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಗುವುದು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ವೈ.ಬಿ .ಸತೀಶ್, ವಲಯಾಧ್ಯಕ್ಷ ಎನ್.ಆರ್. ನಾಗಭೂಷಣರಾವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಖಜಾಂಚಿ ಎಸ್. ನಾಗರಾಜ್, ಸಹ ಕಾರ್ಯದರ್ಶಿ ಹೆಚ್.ಎಂ. ನಾಗರಾಜ್ ತಿಳಿಸಿದ್ದಾರೆ.