ದಾವಣಗೆರೆ, ಜು. 26- ಕಾರ್ಗಿಲ್ ಯುದ್ಧದ 25 ನೇ ವಿಜಯೋತ್ಸವ ರಜತ ಸಂಭ್ರಮಾಚರಣೆ ಯನ್ನು ಎಸ್ಪಿವೈಎಸ್ಎಸ್ ವತಿಯಿಂದ ಶ್ರೀ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಠದಲ್ಲಿ ಅಗ್ನಿಹೋತ್ರ ಹೋಮದೊಂದಿಗೆ ಆಚರಿಸಲಾಯಿತು. ವಲಯ ಸಂಚಾಲಕ ವೀರಭದ್ರಣ್ಣ, ಖಜಾಂಚಿ ಸುರೇಶ್ ಅಜ್ಜಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಸೇನಾಧಿಕಾರಿಗಳಾದ ಅಶೋಕ್, ಬಸಪ್ಪ, ಮಂಜುನಾಥ್ ಉಪಸ್ಥಿತರಿದ್ದು, ಸೇನೆಯ ಬಗ್ಗೆ ಕಾರ್ಗಿಲ್ ಯುದ್ಧದ ಬಗ್ಗೆ ಅಲ್ಲಿಯ ವಾತಾವರಣ ಹಾಗೂ ಬಾರ್ಡರ್ ಬಗ್ಗೆ ಸವಿಸ್ತಾರವಾಗಿ ಹೇಳಿದರು. ಜ್ಯೋತಿ ಪ್ರಾರ್ಥಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಣ್ಣ ಸ್ವಾಗತಿಸಿದರು. ಭರತ್, ಮಲ್ಲಿಕ್ ನಿರೂಪಿಸಿದರು. ಇಂದುಧರ್ ನಿಶಾನಿಮಠ್ ವಂದಿಸಿದರು.