ಬೂತ್‌ ವಿಜಯ ಅಭಿಯಾನಕ್ಕೆ ಕರುಣಾಕರ ರೆಡ್ಡಿ ಚಾಲನೆ

ಬೂತ್‌ ವಿಜಯ ಅಭಿಯಾನಕ್ಕೆ ಕರುಣಾಕರ ರೆಡ್ಡಿ ಚಾಲನೆ

ಹರಪನಹಳ್ಳಿ, ಜ.8- ತಾಲ್ಲೂಕಿನಲ್ಲಿ ಪೂರ್ಣ ಪ್ರಮಾಣ ಸಂಘಟನಾತ್ಮಕವಾಗಿ ಬಿಜೆಪಿಯನ್ನು ಬಲಪಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ `ಬೂತ್ ವಿಜಯ ಅಭಿಯಾನ’ ಕಾರ್ಯಕ್ರಮಕ್ಕೆ ಶಾಸಕ ಜಿ.ಕರುಣಾಕರ ರೆಡ್ಡಿ ಚಾಲನೆ ನೀಡಿದರು.

ತಾಲ್ಲೂಕಿನಲ್ಲಿ ಶಾಸಕರು ಹಮ್ಮಿಕೊಂಡಿದ್ದ ವಿಜಯ ಅಭಿಯಾನದಲ್ಲಿ ನೀಲಗುಂದ, ಯಡಿಹಳ್ಳಿ, ಇಂಗಳಗುಂದಿ, ಅಣಿಮೇಗಳ ತಾಂಡಾ, ಶಿಂಗ್ರಿಹಳ್ಳಿ, ಸತ್ತೂರು, ಜಂಬುಲಿಂಗನಹಳ್ಳಿ, ಹಿರೇಮೇಗಳಗೆರೆ, ಅರೆಬಸಾಪುರ, ಪೋತಲಕಟ್ಟೆ, ಗುಂಡಗತ್ತಿ, ತಲವಾಗಲು, ಕಣಿವೆಹಳ್ಳಿ, ಈಶಾಪುರ, ಚೆನ್ನೇಹಳ್ಳಿ ತಾಂಡಾ, ಹಾರಕನಾಳು ದೊಡ್ಡ ತಾಂಡಾ, ತೊಗರಿಕಟ್ಟಿ ಸೇರಿದಂತೆ ಅನೇಕ ಗ್ರಾಮಗಳಿಗೆ ತೆರಳಿ ಮನೆಗಳ ಮೇಲೆ ಬಿಜೆಪಿ ಧ್ವಜಗಳನ್ನು ಹಾಕಿದರು.

ಬಿಜೆಪಿಯನ್ನು ಸಂಘಟನಾತ್ಮಕವಾಗಿ ಬಲಪಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ `ಬೂತ್ ವಿಜಯ ಅಭಿಯಾನ’ಕ್ಕೆ ಅವರು ತಾಲ್ಲೂಕಿನ ತೊಗರಿಕಟ್ಟಿ ಗ್ರಾಮದಲ್ಲಿ ಚಾಲನೆ ನೀಡಿದರು. ಕೆಲವು ಕಾರ್ಯಕರ್ತರ ಮನೆಗಳಿಗೆ ತೆರಳಿದ ಶಾಸಕರು ಪಕ್ಷದ ಬಾವುಟ ಕೊಟ್ಟು ಸರ್ಕಾರದ ಸಾಧನೆಗಳ ಬಗ್ಗೆ ವಿವರಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಸ್ಪಷ್ಟ ಬಹುಮತ ಪಡೆಯಬೇಕೆಂಬ ಸಂಕಲ್ಪ ಮಾಡಲಾಗಿದೆ. ಹೀಗಾಗಿ, ಪಕ್ಷದ ಸಂಘಟನೆಗೆ ವಿಶೇಷ ಒತ್ತು ಕೊಡಲಾಗುತ್ತಿದೆ ಎಂದು ಅವರು ತಿಳಿಸಿದರು.

ವಿಜಯನಗರ ಜಿಲ್ಲಾ ರೈತ  ಸಂಘದ  ಜಿಲ್ಲಾಧ್ಯಕ್ಷ ಬಾಗಳಿ ಕೊಟ್ರೇಶಪ್ಪ. ತೊಗರಿಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ, ಬಸವರಾಜ್, ಗೌರಿಹಳ್ಳಿ ಕೊಟ್ರೇಶ್, ತೊಗರಿಕಟ್ಟಿ ಹನುಮಂತಪ್ಪ, ಹಾರಕನಾಳ  ವೀರೇಶ್ ಶೆಟ್ಟಿ. ಆರ್. ಲೋಕೇಶ್, ಕೆ.ಪ್ರಕಾಶ್ ವಕೀಲ, ಮುತ್ತಿಗಿ ರೇವಣಸಿದ್ಧಪ್ಪ, ಪೂಜಾರ್ ಮಹೇಶ್, ಶಾಸಕರ ಆಪ್ತ ಸಹಾಯಕ  ಹೇಮಂತ್ ಕುಮಾರ್, ಎಂ.ಮಲ್ಲೇಶ್. ಮಜ್ಜಿಗೆರೆ ಭೀಮಪ್ಪ, ಸಿದ್ದೇಶ್ ರೆಡ್ಡಿ, ಶೀರನಹಳ್ಳಿ ಪ್ರಕಾಶ್, ಶಿಂಗ್ರಿಹಳ್ಳಿ ಮಾಂತೇಶ, ಜೋಗಿ ಬಸವರಾಜ್ ಸೇರಿದಂತೆ ಇತರರು ಇದ್ದರು.

error: Content is protected !!