ನಗರದಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ

ನಗರದಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ

ದಾವಣಗೆರೆ, ಜು. 26 – 25 ವರ್ಷಗಳ ಹಿಂದೆ ಜುಲೈ 26ರಂದು ಕಾರ್ಗಿಲ್ ನಲ್ಲಿ ಹೋರಾಡಿ ಪಾಕಿಸ್ತಾನಿ ಯೋಧರನ್ನು ಹೊಡೆದೋಡಿಸಿ ಭಾರತಕ್ಕೆ ಜಯ ತಂದುಕೊಟ್ಟ ದಿನ. ಆ ವಿಜಯದ ಸಂಕೇತ ಇಂದಿಗೆ 25 ವರ್ಷದ ವಿಜಯೋತ್ಸವದ ಅಂಗವಾಗಿ ಭಾರತೀಯ ವೀರ ಯೋಧರಿಗೆ ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ವೀರ ಯೋಧರಿಗೆ ಸೆಲ್ಯೂಟ್ ಸಲ್ಲಿಸಿ ನಾಗರಿಕರಿಗೆ ಸಿಹಿ ವಿತರಿಸಿ, ವಿಜಯೋತ್ಸವವನ್ನು ಆಚರಿಸಲಾಯಿತು.

ಕಾರ್ಗಿಲ್ ವಿಜಯ್ ದಿವಸ್ ಅಥವಾ ಕಾರ್ಗಿಲ್ ವಿಜಯ ದಿನವನ್ನು ಭಾರತದಲ್ಲಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಪಡೆಗಳನ್ನು ಪರ್ವತಗಳ ಮೇಲಿನ ತಮ್ಮ ಆಕ್ರಮಿತ ಸ್ಥಾನಗಳಿಂದ ಹೊರ ಹಾಕಿ, ವೀರ ಯೋಧರು ಜಯ ಗಳಿಸಿ, ಭಾರತ ದೇಶಕ್ಕೆ ಹೆಮ್ಮೆ ತಂದು ಕೊಟ್ಟ ದಿನವಾಗಿದೆ. ಆ ದಿನವನ್ನು ಕಾರ್ಗಿಲ್ ವಿಜಯೋತ್ಸವನ್ನಾಗಿ ಭಾರತದಲ್ಲಿ ವಿಜೃಂಭ ಣೆಯಿಂದ ಆಚರಿಸಲಾಗುತ್ತಿದೆ. ಇಂತಹ ಸಮಯದಲ್ಲಿ ವೀರ ಯೋಧರಿಗೆ ಒಂದು ಸೆಲ್ಯೂಟ್ ಸಲ್ಲಿಸಿ, ಗೌರವ ಸಮರ್ಪಣೆಯನ್ನು ತಿಳಿಸೋಣ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ತಿಳಿಸಿದರು. 

ಈ ಸಂದರ್ಭದಲ್ಲಿ ಎ. ನಾಗರಾಜ್, ಕೆ.ಜಿ ಶಿವಕುಮಾರ್, ಎಸ್. ಮಲ್ಲಿಕಾರ್ಜುನ್, ಸೋಗಿ ಶಾಂತಕುಮಾರ್, ಸೈಯದ್ ಕಾಲೇಜ್ ಸಾಗರ್ ಎಲ್. ಎಮ್, ಹೆಚ್. ದ್ರಾಕ್ಷಾಯಣಮ್ಮ, ರಾಜೇಶ್ವರಿ, ಅಜಿತ್ ಆಲೂರು, ರಾಮಚಂದ್ರ, ಕಾಯಿ ಪೇಟೆ ಹಾಲೇಶ್, ಪ್ರಶಾಂತ್, ಶೆಟ್ರು, ಕಲ್ಪತರು ಶ್ರೀನಿವಾಸ್, ರಾಜು ಭಂಡಾರಿ, ಶ್ರೀಕಾಂತ್ ಬಗರೆ, ಅಕ್ಬರ್ ಬಾಷಾ, ಬಸವರಾಜ್, ಯುವರಾಜ್ ಇನ್ನು ಮುಂತಾದವರಿದ್ದರು.

error: Content is protected !!