ದಾವಣಗೆರೆ, ಜು. 26 – ತಾಲ್ಲೂಕು ಕಕ್ಕರಗೊಳ್ಳ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶ್ರೀಮತಿ ಸಿ. ಆಶಾ ಸಿದ್ದೇಶ್ ಕೆ.ಆರ್. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮದ ಮುಖಂಡರುಗಳಾದ ಕೆ.ಜಿ. ಬಸವನಗೌಡ್ರು ಆರ್.ಡಿ. ಕುಲಕರ್ಣಿ, ಈಶ್ವರಪ್ಪ ಎಂ., ಕೆ.ಶೇಖರಪ್ಪ, ಹನುಮಂತಪ್ಪ, ಕೆ.ಆರ್.ಸಿದ್ದೇಶ್ ಅವರುಗಳ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಗುತ್ಯೆಪ್ಪ ಸದಸ್ಯರುಗಳಾದ ಮಹಾಂತೇಶ ಗೌಡ್ರು, ಎಂ.ಎನ್. ಕರಿಬಸಪ್ಪ, ವೈ.ಎಸ್. ಪ್ರಸನ್ನ ಕುಮಾರ್, ನವೀನ್ ಕುಮಾರ್.ಕೆ, ಸಾಧಿಕ್, ಸುರೇಶ್ ಆರ್.ಬಿ., ಕೊಟ್ರಮ್ಮ ಕೆ., ಕರಿಬಸಮ್ಮ, ಶಿವಗಂಗಮ್ಮ, ಗಾಯತ್ರಮ್ಮ, ಸತ್ಯಮ್ಮ, ರೇಣುಕಮ್ಮ ಮತ್ತಿತರರು ಉಪಸ್ಥಿತರಿದ್ದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ಶ್ರೀಧರಮೂರ್ತಿ ಚುನಾವಣಾಧಿಕಾರಿ ಕಾರ್ಯ ನಿರ್ವಹಿಸಿದರು.