ದಾವಣಗೆರೆ, ಜು. 25 – ಗೋಣಿವಾಡದ ಶ್ರೀ ಸೋಮೇಶ್ವರ ವಸತಿಯುತ ವಿದ್ಯಾಲಯ ಹಾಗೂ ಸರ್.ಎಂ.ವಿ. ಎಲೈಟ್ ಒಲಂಪಿಯಾಡ್ ಶಾಲೆಯಲ್ಲಿ ಅರ್ಥಪೂರ್ಣವಾಗಿ ಗುರು ಪೂರ್ಣಿಮೆ ಆಚರಿಸಲಾಯಿತು. ಪ್ರಾಥಮಿಕ ವಿಭಾಗದ ಮಕ್ಕಳು ಸನಾತನ ಧರ್ಮ ಗುರುಗಳ ವೇಷ ಧರಿಸಿ ಗುರುಗಳ ಮಹತ್ವ ಹಾಗೂ ಶಿಷ್ಯ ಸಮೂಹದ ಸಾಧನೆ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು. ಪ್ರೌಢ ಶಾಲೆಯ ವಿದ್ಯಾರ್ಥಿಗಳು ಆದಿಶಂಕರಾ ಚಾರ್ಯರ ಕಿರು ನಾಟಕದ ಮೂಲಕ ಶಂಕರಾಚಾರ್ಯರ ಮಹತ್ವವನ್ನು ಸಾರಿದರು. ಅಕ್ಷರ ಕಲಿಸಿದ ಗುರುವಿಗೆ ಹೇಗೆ ಗೌರವ ನೀಡಬೇಕೆಂದು ನೃತ್ಯದ ಮೂಲಕ ಎಲ್ಲರ ಗಮನ ಸೆಳೆದರು. ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪಿ.ಎಚ್. ವೀಣಾ ಹಾಗೂ ಶ್ರೀನಿವಾಸ್ ಮತ್ತು ಶಿಕ್ಷಕರಾದ ಸಾವಿತ್ರಮ್ಮ, ಪಲ್ಲವಿ, ಆಡಳಿತ ಸಿಬ್ಬಂದಿ, ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗೋಣಿವಾಡದಲ್ಲಿ ಅರ್ಥಪೂರ್ಣ ಗುರು ಪೂರ್ಣಿಮೆ
