ದೈಹಿಕ ಶಿಕ್ಷಕರಿಗೆ ವೃತ್ತಿ ಗೌರವ ಮುಖ್ಯ

ದೈಹಿಕ ಶಿಕ್ಷಕರಿಗೆ ವೃತ್ತಿ ಗೌರವ ಮುಖ್ಯ

ಹರಿಹರದ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ

ಹರಿಹರ, ಜು. 25 – ಶಾಲೆಯಲ್ಲಿ ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಮತ್ತು ಶಾಂತಿಯುತ ವಾಗಿ ನಡೆದುಕೊಳ್ಳುವುದ್ಕಕೆ ದೈಹಿಕ ಶಿಕ್ಷಣದ ಪಾತ್ರ ಹೆಚ್ಚು ಪ್ರಾಮುಖ್ಯತೆ ಹೊಂದಿರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಹೇಳಿದರು.

ನಗರದ ಎಂ.ಆರ್.ಬಿ. ಪ್ರೌಢಶಾಲೆಯ ಆವರಣದಲ್ಲಿ ನಡೆದ ಹರಿಹರ ತಾಲ್ಲೂಕು ದೈಹಿಕ ಶಿಕ್ಷಕರ ಮಾಸಿಕ ತರಬೇತಿ ಕಾರ್ಯಾಗಾರ ಹಾಗೂ 2024-25 ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ದೈಹಿಕ ಶಿಕ್ಷಕರು ಮಕ್ಕಳಿಗೆ ಪಾಠದ ಜೊತೆಗೆ ಮಾನಸಿಕವಾಗಿ, ಸದೃಢವಾಗಿ ಇರುವುದಕ್ಕೆ ಬೇಕಾದ ರೀತಿಯಲ್ಲಿ ಯೋಗ, ವ್ಯಾಯಾಮ ತರಬೇತಿ ನೀಡಿ ಅವರನ್ನು ತಯಾರಿಸುವ ಕೆಲಸವನ್ನು ಮಾಡುವುದ ರಿಂದ ಮಕ್ಕಳು ಉತ್ತಮ ಆರೋಗ್ಯವಂತರಾಗುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಚಿತ್ರದುರ್ಗ ಜಿಲ್ಲಾ ಪ್ರಭಾರಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಿದಾನಂದಸ್ವಾಮಿ ಇವರು 6 ರಿಂದ 10 ನೇ ತರಗತಿ ವರೆಗಿನ ದೈಹಿಕ ಶಿಕ್ಷಣ ಪಠ್ಯ ವಿಷಯ ಹಾಗೂ ದಾಖಲೆ ನಿರ್ವಹಣೆಯ ಬಗ್ಗೆ ತರಬೇತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎನ್.ಪಿ.ಮಂಜುಳ ಅವರು, ದೈಹಿಕ ಶಿಕ್ಷನ ಶಿಕ್ಷಕರಿಗೆ ತಮ್ಮ ವೃತ್ತಿಯ ಬಗ್ಗೆ ಅಭಿಮಾನ, ಗೌರವ ಮತ್ತು ಪ್ರೀತಿ ಇರಬೇಕು ಎಂದರು.

ತರಬೇತಿ ಕಾರ್ಯಾಗಾರದಲ್ಲಿ ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಸ್. ಪ್ರಭಾಕರ್, ಎನ್‌ಜಿಓ ಜಿಲ್ಲಾ ಉಪಾಧ್ಯಕ್ಷ ಹಾಲಪ್ಪ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಕರಿಬಸಪ್ಪ ಪ್ಯಾಟಿ ಭಾಗವಹಿಸಿದ್ದರು. 

ಶಿವಮ್ಮ ಸ್ವಾಗತಿಸಿದರು. ಹನುಮಂತಪ್ಪ ನಿರೂಪಿಸಿದರು. ಮಲ್ಲಿಕಾರ್ಜುನ್ ವಂದಿಸಿದರು.

error: Content is protected !!