ದಾವಣಗೆರೆ, ಜು. 25 – ಸ್ಥಳೀಯ ಪಿ.ಜೆ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಜಯತೀರ್ಥರ ಆರಾಧನೆ ಮಹೋತ್ಸವವು ಜರುಗಿತು.
ಸ್ಥಳೀಯ ಪಂಡಿತ ಶ್ರೀ ಗೋಪಾಲಾಚಾರ್ಯ ಮಣ್ಣೂರು ಅವರು ಶ್ರೀ ಜಯತೀರ್ಥರ ಮೇರು ಕೃತಿ ಶ್ರೀ ಮನ್ಯಾಯ ಸುಧಾ ಗ್ರಂಥದ ಉಪನ್ಯಾಸ ನೀಡಿದರು. ಭಕ್ತರು ತಮ್ಮ – ತಮ್ಮ ಮನೆಗಳಲ್ಲಿ ಶ್ರೀ ಜಯತೀರ್ಥರ ಗ್ರಂಥವನ್ನು ಇಟ್ಟುಕೊಳ್ಳಬೇಕೆಂದು ಕರೆ ನೀಡಿದರು.
ವಿಶೇಷ ಪೂಜಾ ಕಾರ್ಯವನ್ನು ಮಠದ ಪ್ರಧಾನ ಅರ್ಚಕ ಶ್ರೀ ಕೃಷ್ಣಾಚಾರ್ಯರು ನಡೆಸಿ ಭಕ್ತರಿಗೆ ತೀರ್ಥ ಪ್ರಸಾದ ನೀಡಿದರು.
ಶ್ರೀ ರಾಯರ ಬೃಂದಾವನದ ಮುಂಭಾಗ ಬರುವ ಆಗಸ್ಟ್ 20 ರಿಂದ ನಡೆಯುವ 353ನೇ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಆರಾಧನೆ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಠದ ವ್ಯವಸ್ಥಾಪಕ ರಾಮಗೋಪಾಲ ಕಟ್ಟಿ, ರಾಜಣ್ಣ, ವೆಂಕಟೇಶ್ ನವರತ್ನ, ಭರಮಸಾಗರದ ಪತ್ರಕರ್ತ ಬಿ.ಜಿ ಅನಂತಪದ್ಮನಾಭ ರಾವ್, ಜನತಾವಾಣಿಯ ಜ್ಯೋತಿಷ್ಯ ತಜ್ಞ ಜಯತೀರ್ಥ ಆಚಾರ್ ಒಡೆಯರ್, ಶಾಮ್ ಕೃಷ್ಣಾಚಾರ್ಯ, ರಾಮಚಂದ್ರರಾವ್ ಇದ್ದರು.