ಚಿತ್ರದುರ್ಗ, ಜು. 25 – ದಾವಣಗೆರೆಯ ಹಿರಿಯ ರಂಗಭೂಮಿ ಕಲಾವಿದ ಚಿಂದೋಡಿ ಶಂಭುಲಿಂಗಪ್ಪ ಅವರ ಶ್ರೀ ಗುರು ವಾದ್ಯ ವೃಂದದಿಂದ ಚಿತ್ರದುರ್ಗದ ತ.ರಾ.ಸು ರಂಗಮಂದಿರದಲ್ಲಿ ನಿನ್ನೆ ನಡೆದ ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ನಗರದ ಬಿ.ಕೆ. ಗಣೇಶ್ ಬಿಸಲೇರಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ವೈ. ಡಿ.ಬದಾಮಿ, ಹಿರಿಯ ರಂಗ ಕಲಾವಿದರು ನಿರ್ದೇಶಕರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೋಡಿಗೆರೆ, ರಾಜು ಪಾಟೀಲ್ ವಕೀಲರು, ಬಿ. ಶಿವಕುಮಾರ್, ಡಿ. ಓ. ಮುರಾರ್ಜಿ, ಚಿಂದೋಡಿ ಶಂಭುಲಿಂಗಪ್ಪ ಉಪಸ್ಥಿತರಿದ್ದರು.