ದಾವಣಗೆರೆ, ಜು.24- ತಿಂಗಳಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ಪ್ರತಿನಿತ್ಯ ಗುತ್ತಿಗೆದಾರರಿಂದ ಕಿರುಕುಳ ಅನುಭವಿಸಲಾಗುತ್ತಿದೆ ಎಂದು ಆರೋಪಿಸಿ ಚಿಗಟೇರಿ ಜಿಲ್ಲಾಸ್ಪತ್ರೆಯ ಹೊರ ಗುತ್ತಿಗೆ ನೌಕರರು ಇಂದು ಪ್ರತಿಭಟನೆ ನಡೆಸಿದರು.
ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಸುಮಾರು 270 ಜನ ಹೊರ ಗುತ್ತಿಗೆ ಪದ್ಧತಿಯಡಿ ಕೆಲಸ ಮಾಡುತ್ತಿದ್ದು, ದೀಕ್ಷಾ ಎಂಬ ಏಜೆನ್ಸಿಯಿಂದ ಮಧ್ಯವರ್ತಿಗಳಾದವರು ಕೆಲಸ ಮಾಡುವ ನೌಕರರಿಗೆ ಪ್ರತಿ ತಿಂಗಳು ವೇತನ ನೀಡುತ್ತಿಲ್ಲ. ಸರಿಯಾಗಿ ಪಿಎಫ್, ಇಎಸ್ಐ ಹಣ ಕಟ್ಟುತ್ತಿಲ್ಲ. ಐದಾರು ತಿಂಗಳಿಗೊಮ್ಮೆ ವೇತನ ಪಾವತಿಸಲಾಗುತ್ತಿದೆ. ಕೇಳಿದರೆ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಾರೆಂದು ಆರೋಪಿಸಿದರು.