ದಾವಣಗೆರೆ ಜು. 24 – ಗುಂಡಿ ಮಹಾದೇವಪ್ಪ ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ನಗರದ ಕನ್ನಡ ಭವನದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಗುರು ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
1992ರಲ್ಲಿ ಪಿಇಎಸ್ ಪ್ರಾಥಮಿಕ ಶಾಲೆಯ 7ನೇ ತರಗತಿ ಮತ್ತು 1995ರಲ್ಲಿ ವಿನಾಯಕ ಟ್ರಸ್ಟ್ ಪ್ರೌಢಶಾಲೆಯ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳೊಂದಿಗೆ ಒಟ್ಟು 18 ಜನ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಅಂದಿನ ಮುಖ್ಯೋ ಪಾಧ್ಯಾಯರುಗಳಾಗಿದ್ದ ದಿ. ಸೀತಾಲಕ್ಷ್ಮಿ ಮತ್ತು ದಿ. ಕುಲ್ಕರ್ಣಿ ಅವರುಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಮಾರಂಭಕ್ಕೆ ಆಗಮಿಸಿದ ಎಲ್ಲಾ ಶಿಕ್ಷಕರುಗಳಿಗೆ ಸನ್ಮಾನಿಸುವುದರೊಂದಿಗೆ ಅನುಭವಗಳನ್ನು, ನೆನಪುಗಳನ್ನು ಹಂಚಿಕೊಳ್ಳುವುದರೊಂದಿಗೆ ಸಮಾರಂಭವನ್ನು ಯಶಸ್ವಿಗೊಳಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರುಗಳಾದ ಸಾವಿತ್ರಮ್ಮ, ಪಾಲಾಕ್ಷಮ್ಮ, ಮಂಗಳಗೌರಿ, ಸುನಂದ, ಗಿರಿಜಮ್ಮ, ಪಂಕಜಾಕ್ಷಿ, ನಾಗರತ್ನ, ಅನಸೂಯ, ಇಂದ್ರಮ್ಮ, ಜಯಮ್ಮ, ಗಾಯತ್ರಿ, ಸಂಧ್ಯಾ, ಶೋಭಾರಾಣಿ, ಭುವನೇಶ್ವರಿ, ರಂಜನಿ, ಚಿದಾನಂದ್ ಹಾಗೂ ಮುಖ್ಯೋಪಾಧ್ಯಾ ಯರಾದ ದಿ. ಸೀತಾಲಕ್ಷ್ಮಿ ಅವರ ಮಕ್ಕಳಾದ ಪ್ರಸಾದ್, ಪ್ರದೀಪ್ ಉಪಸ್ಥಿತರಿದ್ದರು.