ದಾವಣಗೆರೆ, ಜು. 24 – ಚಾಲಕರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಮತ್ತು ಅನಧಿಕೃತ ದ್ವಿಚಕ್ರವಾಹನ ಟ್ಯಾಕ್ಸಿಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ಚಾಲಕರ ಒಕ್ಕೂಟದ ನಗರ ಘಟಕದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ದೇಶದ ಹಾಗೂ ರಾಜ್ಯದ ಪ್ರಗತಿಗೆ ಪರೋಕ್ಷವಾಗಿ ಕಾರಣರಾಗಿರುವ ಚಾಲಕರ ಬದುಕನ್ನು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಾಯ ಮಾಡಬೇಕೆಂದು ಹಾಗೂ ಆಟೋ ಮತ್ತು ಕ್ಯಾಬ್ ಚಾಲಕರುಗಳಿಗೆ ಮಾರಕವಾಗಿರುವ ದ್ವಿಚಕ್ರ ವಾಹನ ಟ್ಯಾಕ್ಸಿಯನ್ನು ಈ ಕೂಡಲೇ ರದ್ದುಗೊಳಿ ಸಬೇಕೆಂದು ಜಿಲ್ಲಾಧಿಕಾರಿಗಳಾದ ಜಿ.ಎಂ. ಗಂಗಾಧರ ಸ್ವಾಮಿ ಅವರ ಮೂಲಕ ಮುಖ್ಯ ಮಂತ್ರಿ ಹಾಗೂ ಸಾರಿಗೆ ಸಚಿವ ರಿಗೆ ಮನವಿ ಸಲ್ಲಿಸಲಾಯಿತು.
ಅಲ್ಲದೇ ಈ ವಿಚಾರವಾಗಿ ಹಲವಾರು ಬಾರಿ ಒಕ್ಕೂಟವು ಹೋರಾಟ ಮಾಡಿದರೂ ಸಹ ಇಂದಿನವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ಸರ್ಕಾರದ ಗಮನ ಸೆಳೆಯುವ ಹಾಗೂ ಎಚ್ಚರಿಸುವ ನಿಟ್ಟಿನಲ್ಲಿ `ನಿರಂತರ ಪತ್ರ ಚಳವಳಿ’ ಹಮ್ಮಿಕೊಳ್ಳಲಾಗಿದೆ ಎಂದು ಚಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷರು ತಿಳಿಸಿದರು
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ಅರವಿಂದಾಕ್ಷ ಡಿ., ಜಿಲ್ಲಾಧ್ಯಕ್ಷ ಪಿ.ಬಿ. ಅಂಜುಕುಮಾರ್, ಜಿಲ್ಲಾ ಕಾರ್ಯಾ ಧ್ಯಕ್ಷ ಜಯರಾಂ ಎ., ಸಂಚಾಲಕ ಇಮ್ರಾನ್ ಭಾಷಾ ಹಾಗೂ ಪದಾಧಿಕಾರಿಗಳಾದ ಮೈನು, ಕರೀಂ ಖಾನ್, ತಿಪ್ಪೇಸ್ವಾಮಿ ಸಿ., ದಾ.ಹ. ಶಿವಕುಮಾರ್, ಐಗೂರು ಪ್ರಕಾಶ್, ಮಾರುತಿ ತಳವಾರ, ಗುರುರಾಜ್ ಎನ್., ಅಣ್ಣಯ್ಯ ಜಿ., ಲೋಹಿತ್‍ಕುಮಾರ್ ಎ., ಬಸವರಾಜ್ ಎಂ. ಹಾಗೂ ಒಕ್ಕೂಟದ ಸದಸ್ಯರು ಹಾಜರಿದ್ದರು.