ಅರಸೀಕೆರೆ ಲಿಂಗೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳದಿಂದ 1.50 ಲಕ್ಷ ರೂ. ನೆರವು

ಅರಸೀಕೆರೆ ಲಿಂಗೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳದಿಂದ 1.50 ಲಕ್ಷ ರೂ. ನೆರವು

ಹರಪನಹಳ್ಳಿ, ಜು. 24 – ತಾಲ್ಲೂಕಿನ ಅರಸೀಕೆರೆ ಗ್ರಾಮದ ಪ್ರಾಚೀನ ಲಿಂಗೇಶ್ವರ ದೇವಸ್ಥಾನದ ಜೀರ್ಣೋ ದ್ದಾರಕ್ಕೆ   ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ  ನೀಡಲಾದ 1.50 ಲಕ್ಷ    ರೂಪಾಯಿಗಳ ಚೆಕ್ಕನ್ನು  ಜಿಲ್ಲಾ ನಿರ್ದೇಶಕ ಜನಾರ್ಧನ್ ನೀಡಿದರು.

ಈ ವೇಳೆ ಜನಾರ್ಧನ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಅನೇಕ ಯೋಜನೆಗಳಿಗೆ 1990 ರಿಂದ 2024 ರ ವರೆಗೆ ಜ್ಞಾನ ದೀಪ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮಕ್ಕೆ 6116.58 ಲಕ್ಷ, ಗ್ರಾಮ ಕಲ್ಯಾಣ ಯೋಜನೆಗೆ 6868.49 ಲಕ್ಷ, ವಾತ್ಸಲ್ಯ ಕಾರ್ಯ ಕ್ರಮಕ್ಕೆ 8864.13 ಲಕ್ಷ, ಜನ ಮಂಗಲ ಕಾರ್ಯ ಕ್ರಮಕ್ಕೆ 27381.59 ಲಕ್ಷ, ಒಟ್ಟು 47790.34 ಲಕ್ಷ ಅನುದಾನ ನೀಡಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಯೋಜನಾ ಧಿಕಾರಿ  ಬಾಬು, ಮೇಲ್ವಿಚಾರಕ  ಪ್ರಶಾಂತ್ ಶೆಟ್ಟಿ, ಮುಖಂಡ ರಾದ ಎಂ. ಪರುಸಪ್ಪ, ವೈ.ಟಿ.ಕೊಟ್ರೇಶ್ ವಕೀಲರು, ಟಿ.ಎಂ. ಶಿವಮೂರ್ತಯ್ಯ, ರಂಗಪ್ಪ, ಟಿ. ಪರುಸಪ್ಪ, ದೊಡ್ಡ ಹನುಮಂತಪ್ಪ, ಅಜ್ಜನಗೌಡ್ರು, ರಾಮಣ್ಣ, ಎಸ್.ಎಂ. ಶೈಲಜಾ, ಎಂ.ಕೊಟ್ರಮ್ಮ, ಗೀತಾ, ನಿರ್ಮಲ ಹಾಗೂ ಗ್ರಾಮಸ್ಥರು ಹಾಜರಿದ್ದರು.

error: Content is protected !!