ವಿಕಸಿತ ಭಾರತದ ಬಜೆಟ್ ಅಲ್ಲ, ಮೋದಿ ಕುರ್ಚಿ ಉಳಿಸುವ ಬಜೆಟ್

ವಿಕಸಿತ ಭಾರತದ ಬಜೆಟ್ ಅಲ್ಲ, ಮೋದಿ ಕುರ್ಚಿ ಉಳಿಸುವ ಬಜೆಟ್

ವಿಕಸಿತ ಭಾರತದ ಬಜೆಟ್ ಅಲ್ಲ. ವಿನಾಶ ಭಾರತದ ಬಜೆಟ್ ಆಗಿದೆ. ಮೋದಿ ಅಧಿಕಾರದ ಕುರ್ಚಿ ಉಳಿಸಿಕೊಳ್ಳಲು ಆಂಧ್ರಪ್ರದೇಶ ಹಾಗೂ ಬಿಹಾರಕ್ಕೆ ಹೆಚ್ಚು ಅನುದಾನವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ನಲ್ಲಿ ನೀಡಲಾಗಿದೆ.

ಕರ್ನಾಟಕದ ಮೇಕೆದಾಟು ಯೋಜನೆಗೆ ಅನುಮತಿ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆೆಗೆ ಹಣ ನೀಡಿಲ್ಲ. ಕರ್ನಾಟಕ ರಾಜ್ಯಕ್ಕೆ ಯಾವುದೇ ವಿಶೇಷ ಯೋಜನೆ ರೂಪಿಸಿಲ್ಲ. ಬೆಳ್ಳಿ, ಬಂಗಾರ, ವಜ್ರ, ಪ್ಲಾಟಿನಂಗಳ ಮೇಲೆ ಕಸ್ಟಮ್ ತೆರಿಗೆ ಇಳಿಸುವ ಮೂಲಕ ಮೋದಿ ಸರ್ಕಾರ ಶ್ರೀಮಂತರ ಪರ ಎಂದು ರುಜವಾತಾಗಿದೆ.

ಹಳೆಯ ಆದಾಯ ತೆರಿಗೆ ಪದ್ಧತಿಯಲ್ಲಿ ಇದ್ದವರಿಗೆ ಯಾವುದೇ ರಿಯಾಯತಿ ನೀಡಿಲ್ಲ. ಮೋದಿ ಸರ್ಕಾರ ಐದು ವರ್ಷಗಳಲ್ಲಿ ನಾಲ್ಕು ಕೋಟಿ ಉದ್ಯೋಗದ ಭರವಸೆಯನ್ನು ಬಜೆಟ್‌ನಲ್ಲಿ ನೀಡಲಾಗಿದೆ. ಮೋದಿ ಅಧಿಕಾರಕ್ಕೆ ಬಂದು ಹತ್ತು ವರ್ಷಗಳಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆ ನೀಡಿ ವಂಚಿಸಿದ್ದಾರೆ.

ದೇಶದ ಬಡವರು, ರೈತರಿಗೆ, ಮಹಿಳೆಯರು, ಕಾರ್ಮಿಕರಿಗೆ ಯಾವುದೇ ಕಾರ್ಯಕ್ರಮ ಜಾರಿಗೊಳಿಸಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರಿಗೆ ಬಜೆಟ್‌ನಲ್ಲಿ ಸಾಮಾಜಿಕ ನ್ಯಾಯ ನೀಡಿಲ್ಲ. ದೂರದೃಷ್ಠಿ ಇಲ್ಲದ ಕೇವಲ ಅಂಕಿ-ಸಂಖ್ಯೆಗಳ ಬಜೆಟ್ ಇದಾಗಿದೆ. 

– ಡಿ. ಬಸವರಾಜ್, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ

error: Content is protected !!