ಕೊರೊನಾ ನಂತರ ಇಡೀ ವಿಶ್ವವೇ ಇನ್ನೂ ಆರ್ಥಿಕ ಚೇತರಿಕೆ ಕಾಣದ ಈ ದಿನಗಳಲ್ಲಿ, ಭಾರತವು ಆರ್ಥಿಕವಾಗಿ ಚೇತರಿಸಿಕೊಂಡು ವಿಶ್ವದಲ್ಲಿಯೇ ಅರ್ಥಿಕವಾಗಿ ಮುನ್ನುಗ್ಗುತ್ತಿರುವ ಏಕ ಮಾತ್ರ ದೇಶವಾಗಿದೆ.
ಈ ಬಜೆಟ್ ನಲ್ಲಿ ಮಾನ್ಯ ಅರ್ಥ ಸಚಿವರು, ಒಂದು ಕೋಟಿ ಯುವಕರಿಗೆ ಹೊಸ ಇಂಟರ್ನ್‌ಶಿಪ್ ಯೋಜನೆ ಮೂಲಕ, 12 ತಿಂಗಳು 6000 ರೂ ಶಿಷ್ಯ ವೇತನ ಸಹಿತ ಕೌಶಲ್ಯ ತರಬೇತಿ ನೀಡುವುದರ ಮೂಲಕ ಯುವಕರ ಏಳ್ಗೆಗೆ ಆದ್ಯತೆ ನೀಡಿದ್ದಾರೆ. ಮಹಿಳಾ ಸಬಲೀಕರಣಕ್ಕೆ 3 ಲಕ್ಷ ಕೋಟಿ ರೂಪಾಯಿ ನೀಡುವುದರ ಮೂಲಕ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಗೆ 2.66 ಲಕ್ಷ ಕೋಟಿ ರೂಪಾಯಿ ನೀಡುವುದರ ಮೂಲಕ ಗ್ರಾಮೀಣಾಭಿವೃದ್ಧಿ ಗೆ ಒತ್ತು ನೀಡಿದ್ದಾರೆ.
ಕೃಷಿ ವಲಯಕ್ಕೆ 1.52 ಲಕ್ಷ ಕೋಟಿ ರೂಪಾಯಿಗಳನ್ನು ಕೊಡುವುದರ ಮೂಲಕ ಕೃಷಿ ವಲಯಕ್ಕೆ ಉತ್ತೇಜನ ನೀಡಿದ್ದಾರೆ. ಮೂಲ ಸೌಕರ್ಯಕ್ಕೆ 11,11,111 ಲಕ್ಷ ರೂಪಾಯಿ ಮೀಸಲಿಡುವುದರ ಮೂಲಕ ಮೂಲಸೌಕರ್ಯ ವಲಯಕ್ಕೆ ಉತ್ತೇಜನ ನೀಡಿದ್ದಾರೆ.
ಸಣ್ಣ ಕೈಗಾರಿಕಾ ವಲಯಕ್ಕೆ 1.5 ಲಕ್ಷ ಕೋಟಿ ರೂಪಾಯಿ ಬಡ್ಡಿ ರಹಿತ ದೀರ್ಘಾವಧಿ ಸಾಲ ನೀಡುವುದರ ಮೂಲಕ, ಸಣ್ಣ ಕೈಗಾರಿಕೆ ವಲಯಕ್ಕೆ ಆದ್ಯತೆ ನೀಡಿದ್ದಾರೆ. ತೆರಿಗೆ ಭಾರವನ್ನು ಕಡಿಮೆ ಮಾಡುವುದರ ಮೂಲಕ ಬಡ, ಮಧ್ಯಮ, ಸಂಬಳದಾರರಿಗೂ ಸಹಾಯ ಮಾಡಿದ್ದಾರೆ. ಈ ಮೂಲಕ ವಿತ್ತ ಸಚಿವರು ಯುವಕ, ರೈತ, ಮಹಿಳೆ, ಬಡವರ ಮೂಲಕ ಸಮಾಜದ ಎಲ್ಲ ಜನಾಂಗ ಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.
– ರಾಜಶೇಖರ ನಾಗಪ್ಪ, ಜಿಲ್ಲಾಧ್ಯಕ್ಷರು, ಬಿಜೆಪಿ, ದಾವಣಗೆರೆ.